ಕಾಸರಗೋಡು: ನಗರದ ಸರ್ಕಾರಿ ಹೈಯರ್ ಸೆಕೆಂಡರಿಯಿಂದ 2 ವರ್ಷಗಳ ತರಬೇತಿ ಪೂರ್ಣಗೊಳಿಸಿದ ವಿದ್ಯಾರ್ಥಿ ಪೊಲೀಸ್ ಕ್ಯಾಡೆಟ್(ಎಸ್‍ಪಿಸಿ)238ನೇ ಘಟಕದ ಪಾಸಿಂಗ್ ಔಟ್ ಪರೇಡ್ ಶಾಲಾ ಮೈದಾನದಲ್ಲಿ ನಡೆಯಿತು.
ಪಾಸಿಂಗ್ ಔಟ್ ಪರೇಡ್‍ನಲ್ಲಿ ಕಾಸರಗೋಡು ಹೆಚ್ಚುವರಿ ಎಸ್ಪಿ ಡಾ. ಬಾಲಕೃಷ್ಣನ್ ನಾಯರ್ ಗೌರವ ವಂದನೆ ಸ್ವೀಕರಿಸಿದರು. ನಗರಸಭಾ ಅಧ್ಯಕ್ಷ ಅಬ್ಬಾಸ್ ಬೀಗಂ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ನಗರಸಭಾ ಶಿಕ್ಷಣ-ಕಲೆ-ಕ್ರೀಡಾ ಸ್ಥಾಯಿ ಸಮಿತಿ ಅಧ್ಯಕ್ಷೆ ರಜಿನಿ ಪ್ರಭಾಕರ, ನಗರಸಭಾ ಸದಸ್ಯೆ ರಂಜಿತಾ, ಎಸ್.ಎಚ್.ಓ ನಳಿನಾಕ್ಷನ್, ಮುಖ್ಯ ಶಿಕ್ಷಕಿ ಎ.ಉಷಾ, ಹೆಚ್ಚುವರಿ ಎಸ್‍ಪಿಸಿ ಅಧಿಕಾರಿ ಟಿ. ತಂಬಾನ್, ಪಿಟಿಎ ಅಧ್ಯಕ್ಷ ಅಬೂಬಕರ್ ತುರುತ್ತಿ, ಪ್ರಭಾರ ಪ್ರಾಂಶುಪಾಲ ವಿನೋದ್ ಕುಮಾರ್, ಎಸ್‍ಪಿಸಿ ತರಬೇತುದಾರರಾದ ಸಿಪಿಒ ಕೆ.ವಿ. ರಾಜೇಶ್, ಸೌಮ್ಯ, ಎಸ್.ಐ.ಪಿ. ಬಿಜು ಮೋನ್, ಎಎಸ್‍ಐ ಕೆ.ಶ್ರೀನಿವಾಸನ್, ಪಿ.ಜೆ ಜೋಸೆಫ್, ಸಿಪಿಒ ಡಾ.ಪಿ. ಸಂಧ್ಯಾಕುಮಾರಿ, ಟಿ. ಮಧು ಪ್ರಶಾಂತ್, ವಿದ್ಯಾರ್ಥಿಗಳ ಪಾಲಕರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸದಸ್ಯರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.





