ಕಾಸರಗೋಡು: ಕೋಯಿಕ್ಕೋಡಿನ ಶಿಕ್ಷಕಿ ಅಲೀನಾ ಅವರ ಸಾವಿನ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಆಗ್ರಹಿಸಿ ಕೇರಳ ಪ್ರದೇಶ್ ಸ್ಕೂಲ್ ಟೀಚರ್ಸ್ ಅಸೋಸಿಯೇಶನ್(ಕೆ.ಪಿ.ಎಸ್.ಟಿ.ಎ)ಜಿಲ್ಲಾ ಸಮಿತಿ ವತಿಯಿಂದ ಕಾಸರಗೋಡು ಜಿಲ್ಲಾ ಶಿಕ್ಷಣಾಧಿಕಾರಿ ಕಚೇರಿ ಎದುರು ಪ್ರತಿಭಟನಾ ಧರಣಿ ನಡೆಸಲಾಯಿತು.
ಸರ್ಕಾರ ನೇಮಕಾತಿ ಅಂಗೀಕಾರ ನಿಷೇಧಿಸಿರುವುದು ಅಲಿನಾ ಟೀಚರ್ ಸಾವಿಗೆ ಕಾರಣವಾಗಿದ್ದು, ಈ ಬಗ್ಗೆ ಸಮಗ್ರ ತನಿಖೆಗೆ ಮುಂದಾಗಬೇಕು ಎಂದು ಪ್ರತಿಭಟನಕಾರರು ಆಗ್ರಹಿಸಿದರು.
ಕೆಪಿಎಸ್‍ಟಿಎ, ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಪ್ರಶಾಂತ ಕಾನತ್ತೂರು ಧರಣಿ ಉದ್ಘಾಟಿಸಿ ಮಾತನಾಡಿ, ನೇಮಕಾತಿ ಅಂಗೀಕಾರ ನೀಡದೆ ಶಿಕ್ಷಕರನ್ನು ಆತ್ಮಹತ್ಯೆಗೆ ಪ್ರೇರೇಪಿಸುವ ಸರ್ಕಾರದ ಧೋರಣೆ ಖಂಡನೀಯ. ನೇಮಕಾತಿ ಅಂಗೀಕಾರ ಲಭಿಸದೆ ನೂರಾರು ಮಂದಿ ಶಿಕ್ಷಕರು ಸಾವಿರ ಶಿಕ್ಷಕರು ನರಕಯಾತನೆ ಅನುಭವಿಸುತ್ತಿದ್ದು, ಈ ಬಗ್ಗೆ ಸರ್ಕಾರ ಅಗತ್ಯ ಮಾನದಂಡ ಪಾಲಿಸಬೇಕು ಎಂದು ತಿಳಿಸಿದರು. ಸಂಘಟನೆ ಜಿಲ್ಲಾಧ್ಯಕ್ಷ ಎ.ರಾಧಾಕೃಷ್ಣನ್ ಅಧ್ಯಕ್ಷತೆ ವಹಿಸಿದ್ದರು.
ಕೆಪಿಎಸ್‍ಟಿಎ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಜೋಮಿ ಟಿ.ಜೋಸ್, ಜಿಲ್ಲಾಧ್ಯಕ್ಷ ಪಿ.ಟಿ. ಬೆನ್ನಿ, ಜಿಲ್ಲಾ ಕಾರ್ಯದರ್ಶಿ ಕೆ. ಗೋಪಾಲಕೃಷ್ಣನ್, ರಾಜ್ಯ ಸಮಿತಿ ಸದಸ್ಯರಾದ ಸ್ವಪ್ನಾ ಜಾರ್ಜ್, ಪಿ. ಜಲಜಾಕ್ಷಿ, ಎ. ವೇಣುಕುಮಾರ್, ಕೆ.ವಿ. ಜನಾರ್ದನನ್, ಕೆ. ಸುಗತನ್, ಕೆ.ಎ. ಜಾನ್, ಹರೀಶ್ ಪೆರಾಯಿಲ್, ಪಿ. ಶೈಮಾ, ಸಂತೋಷ್ ಕ್ರಾಸ್ತಾ, ವಿಜಯನ್, ಶಂಕರಪಾಡಿ, ರಜಿನಿ ಕೆ. ಜೋಸೆಫ್, ಒ. ಸೀತಾರಾಂ ಮೊದಲದವರು ಉಪಸ್ಥಿತರಿದ್ದರು.






