ಕಾಸರಗೋಡು: ನಾಯರ್ಸ್ ಸರ್ವೀಸ್ ಸೊಸೈಟಿ(ಎನ್‍ಎಸ್‍ಎಸ್)ಕಾಸರಗೋಡು ತಾಲೂಕು ಯೂನಿಯನ್ ವತಿಯಿಂದ ಸಮಾಜ ಸುಧಾರಕ, ಸಮುದಾಯ ಆಚಾರ್ಯ ಮನ್ನತ್ ಪದ್ಮನಾಭನ್ ಅವರ 55ನೇ ಪುಣ್ಯ ತಿಥಿಯನ್ನು ಕಾಸರಗೋಡಿನಲ್ಲಿ ಆಚರಿಸಲಾಯಿತು.
ಎನ್‍ಎಸ್‍ಎಸ್ ಆಡಳಿತ ಮಂಡಳಿ ಸದಸ್ಯ ಹಾಗೂ ಕಾಸರಗೋಡು ತಾಲೂಕು ಯೂನಿಯನ್ ಅಧ್ಯಕ್ಷ, ವಕೀಲ ಎ. ಬಾಲಕೃಷ್ಣನ್ ನಾಯರ್ ದೀಪ ಬೆಳಗಿಸಿ ಸಮಾರಂಭ ಉದ್ಘಾಟನೆ ನೆರವೇರಿಸಿದರು, ಎನ್ ಎಸ್‍ಎಸ್ ತಾಲೂಕು ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು.






