ಕಾಸರಗೋಡು: ಜಿಲ್ಲಾದ್ಯಂತ ಶಿವಾಲಯಗಳಲ್ಲಿ ಶಿವರಾತ್ರಿ ಮಹೋತ್ಸವಕ್ಕೆ ಬುಧವಾರ ಬೆಳಗ್ಗೆ ಚಾಲನೆ ನೀಡಲಾಯಿತು. ಶಿವಕ್ಷೇತ್ರಗಳಲ್ಲಿ ಶತರುದ್ರಾಭಿಷೇಕ, ಬಲಿವಾಡುಕೂಟ, ವಿಶೇಷ ಅಭಿಷೇಕಗಳೊಂದಿಗೆ ಪೂಜೆ ನೆರವೇರಿತು.
ಪೆರ್ಲ ಸನಿಹದ ಬಜಕೂಡ್ಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಶಿವರಾತ್ರಿಮಹೋತ್ಸವ ಅಂಗವಾಗಿ ಫೆ.26ರಂದು ಮಧ್ಯಾಹ್ನ ಶತರುದ್ರಾಭಿಷೇಕ ಮತ್ತು ಬಲಿವಾಡುಕೂಟ ನಡೆಯಿತು. ಇದೇ ಸಂದರ್ಭ ಶ್ರೀ ಮಹಾಲಿಂಗೇಶ್ವರ ಭಜನಾ ಸಂಘದ 40ನೇ ವಾರ್ಷಿಕೋತ್ಸವ ಮತ್ತು ಶಿವರಾತ್ರಿ ಭಜನೆ ನಡೆಯಿತು.
ಎಡನೀರು ಸನಿಹದ ಪಾಡಿ ಕೈಲಾರ್ ಶ್ರೀ ಶಿವಕ್ಷೇತ್ರದಲ್ಲಿ ಮಹಾಶಿವರಾತ್ರಿ ಆಚರಣೆ, ಏಕಾದಶ ಮಹಾರುದ್ರಾಭಿಷೇಕ ಹಾಗೂ ಶಾಸ್ವತ ಚಪ್ಪರ ಸಮರ್ಪಣಾ ಕಾರ್ಯಕ್ರಮ ಜರುಗಿತು. ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಶಾಶ್ವತ ಚಪ್ಪರ ಲೋಕಾರ್ಪಣೆಗೈದರು. ಬ್ರಹ್ಮಶ್ರೀ ಇರವೈಲ್ ಕೇಶವ ತಂತ್ರಿ ದಿವ್ಯ ಉಪಸ್ಥಿತರಿದ್ದರು. ಕಾರ್ಯಕ್ರಮದ ಅಂಗವಾಗಿ ರುದ್ರಪಾರಾಯಣ, ಸಂಕಲ್ಪಾಭಿಷೇಕ, ಏಕಾದಶ ರುದ್ರಾಬಿಷೇಕ, ಭಜನೆ, ಕುಣಿತ ಭಜನೆ ನಡೆಯಿತು. ಪೆರ್ಲ ಸನಿಹದ ಚೇರ್ಕಬೆ ಶ್ರೀ ಶಾಸ್ತಾರ ಸುಬ್ರಹ್ಮಣ್ಯೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಅಂಗವಾಗಿ ಶತರುದ್ರಾಭಿಷೇಕ ಕಾರ್ಯಕ್ರಮ ಜರುಗಿತು
ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನದಲ್ಲಿ ಶಿವಪಂಚಾಕ್ಷರಿ ಜಲಲಿಪಿ ಅಭಿಯಾನ, ಪುಸ್ತಕ ಬಿಡುಗಡೆ ಸಮರಂಭ ನಡೆಯಿತು. ಮಧೂರು ಶ್ರೀ ಮದನಂ
ತೇಶ್ವರ ಸಿದ್ಧಿವಿನಾಯಕ ದೇವಸ್ಥಾನ, ಕಾಸರಗೋಡು ಶ್ರೀ ಮಲ್ಲಿಕಾರ್ಜುನ ದೇವಸ್ಥಾನ, ಶಿರಿಯ ಶ್ರೀ ಶಂಕರನಾರಾಯಣ ದೇವಸ್ಥಾನ, ಪರಕ್ಕಿಲ ಶ್ರೀ ಮಹಾದೇವ ದೇವಸ್ಥಾನ, ಪುಳ್ಕೂರ್ ಶ್ರೀ ಮಹಾದೇವ ದೇವಸ್ಥಾನ, ಅಡೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ನಾರಂಪಾಡಿ ಶ್ರೀ ಉಮಾಮಹೇಶ್ವರಿ ದೇವಸ್ಥಾನ, ವರ್ಕಾಡಿ ಪಾತೂರು ಶ್ರೀ ಸೂರ್ಯೇಶ್ವರ ದೇವಸ್ಥಾನ ಸಏರಿದಂತೆ ವಿವಿಧ ದೇಗುಲಗಳಲ್ಲಿ ಮಹಾಶಿವರಾತ್ರಿ ಅಂಗವಾಗಿ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿತ್ತು.
1)ಪಾಡಿ ಕೈಲಾರ್ ಶ್ರೀ ಶಿವಕ್ಷೇತ್ರದಲ್ಲಿ ಮಹಾಶಿವರಾತ್ರಿ ಅಂಗವಾಗಿ ಶ್ರೀದೇವರಿಗೆ ವಿಶೇಷ ಪೂಜೆ ನಡೆಯಿತು.
2)ಶಿವರಾತ್ರಿಮಹೋತ್ಸವ ಅಂಗವಾಗಿ ಬಜಕೂಡ್ಲು ಶ್ರೀ ಮಹಾಲಿಂಗೇಶ್ವರ ದೇವರಿಗೆ ಶತರುದ್ರಾಭಿಷೇಕದೊಂದಿಗೆ ವಿಶೇಷ ಅಲಂಕಾರ ಸೇವೆ ನಡೆಯಿತು.







