ಕೊಚ್ಚಿ: ಸಿಪಿಐ ಎರ್ನಾಕುಳಂ ಜಿಲ್ಲಾ ಮಾಜಿ ಕಾರ್ಯದರ್ಶಿ ಮತ್ತು ಮಾಜಿ ಶಾಸಕ ಪಿ. ರಾಜು ನಿಧನರಾಗಿದ್ದಾರೆ. ಎರ್ನಾಕುಳಂ ಜಿಲ್ಲೆಯ ಸಿಪಿಐನ ಪ್ರಬಲ ನಾಯಕರಾಗಿದ್ದರು ಪಿ ರಾಜು. ಅವರು ಸಿಪಿಐನ ಮಾಜಿ ಎರ್ನಾಕುಳಂ ಜಿಲ್ಲಾ ಕಾರ್ಯದರ್ಶಿ ಮತ್ತು ಮಾಜಿ ಶಾಸಕರಾಗಿದ್ದರು.
ಅವರು ಕೊಚ್ಚಿಯ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 73 ವರ್ಷ ವಯಸ್ಸಾಗಿತ್ತು. ಅವರು 1991 ಮತ್ತು 1996 ರಲ್ಲಿ ಉತ್ತರ ಪರವೂರಿನಿಂದ ವಿಧಾನಸಭೆಗೆ ಆಯ್ಕೆಯಾಗಿದ್ದÀರು. ಅವರು ಸಿಪಿಐನ ಎರ್ನಾಕುಳಂ ಜಿಲ್ಲಾ ಕಾರ್ಯದರ್ಶಿಯಾಗಿ ಎರಡು ಬಾರಿ ಸೇವೆ ಸಲ್ಲಿಸಿದ್ದರು. ಇತ್ತೀಚೆಗೆ ಪಕ್ಷದಲ್ಲಿ ಮುನಿಸಿ ಹೊರಬಂದು ಪಿ.ರಾಜು ಸಾರ್ವಜನಿಕ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದರು.






