ಕಾಸರಗೋಡು: ಮುಳಿಯಾರ್ ಪಂಚಾಯಿತಿಯ ಬೋವಿಕಾನ ಬಿಎಆರ್ ಹೈಯರ್ ಸೆಕೆಂಡರಿ ಶಾಲಾ ಮಕ್ಕಳ ಅನುಕೂಲಕ್ಕಾಗಿ ನೂತನವಾಗಿ ನಿರ್ಮಿಸಲಾದ ಕಟ್ಟಡದ ಉದ್ಘಾಟನೆಯನ್ನು ಫೆ. 14ರಂದು ಮಧ್ಯಾಹ್ನ 2ಗಂಟೆಗೆ ಶಿಕ್ಷಣ ಮತ್ತು ಕಾರ್ಮಿಕ ಖಾತೆ ಸಚಿವ ವಿ.ಶಿವನ್ ಕುಟ್ಟಿ ನಿರ್ವಹಿಸುವರು. ಶಾಸಕ ಸಿ.ಎಚ್.ಕುಞಂಬು ಅಧ್ಯಕ್ಷತೆ ವಹಿಸುವರು ಎಂದು ಶಾಲಾ ವ್ಯವಸ್ಥಾಪಕ ವಿ. ಗಂಗಾಧರನ್ ನಾಯರ್ ಪಾಡಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಸಂಸದ ರಾಜಮೋಹನ್ ಉಣ್ಣಿತ್ತಾನ್ ಮುಖ್ಯ ಅತಿಥಿಯಾಗಿ ಭಾಗವಹಿಸುವರು. ಶಾಸಕರಾದ ಇ. ಚಂದ್ರಶೇಖರನ್, ಎನ್.ಎ.ನೆಲ್ಲಿಕುನ್ನು, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್, ಇತರ ಜನಪ್ರತಿನಿಧಿಗಳು, ರಾಜಕೀಯ ಪಕ್ಷಗಳ ಪ್ರತಿನಿಧಿಗಳು, ಸಾಂಸ್ಕøತಿಕ ಮತ್ತು ಸಾಮಾಜಿಕ ಮುಖಂಡರು ಪಾಲ್ಗೊಳ್ಳುವರು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಪಿಟಿಎ ಅಧ್ಯಕ್ಷ ಮಣಿಕಂಠನ್ ಓಂಬೈಲ್, ಆಡಳಿತಾಧಿಕಾರಿ ಎಂ.ಸಿ.ಶೇಖರನ್ ನಂಬಿಯಾರ್, ಪ್ರಾಂಶುಪಾಲ ವಿ.ಮೆಜೋ ಜೋಸೆಫ್, ಆಡಳಿತ ಪ್ರತಿನಿಧಿಗಳಾದ ಇ.ಕಮಲಾಕ್ಷನ್, ಸಿ.ರವೀಂದ್ರನ್ ಉಪಸ್ಥಿತರಿದ್ದರು.






