ಬದಿಯಡ್ಕ: ಲೋಕಕ್ಕೇ ಬೆಳಕನ್ನು ನೀಡುವ ಸೂರ್ಯನ ಜನ್ಮದಿನಾಚರಣೆ ರಥಸಪ್ತಮಿ ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದಲ್ಲಿ ಮಂಗಳವಾರ ಜರಗಿತು. ಪೂರ್ವ ಪ್ರಾಥಮಿಕ ವಿದ್ಯಾರ್ಥಿಗಳು ಭಗವದ್ಗೀತೆಯ ಶ್ಲೋಕವನ್ನು ಪಠಿಸುತ್ತಾ ಸೂರ್ಯನಿಗೆ ವಂದಿಸಿದರು. ಶಾಲೆಯ ವಿದ್ಯಾರ್ಥಿಗಳೆಲ್ಲರೂ ಸಭಾಂಗಣದಲ್ಲಿ ನಾಮಸ್ಮರಣೆಯೊಂದಿಗೆ ಸೂರ್ಯನಮಸ್ಕಾರದಲ್ಲಿ ಪಾಲ್ಗೊಂಡರು. ವಿದ್ಯಾರ್ಥಿ ನಾಯಕರು ರಥಸಪ್ತಮಿಯ ದಿನವಿಶೇಷವನ್ನು ತಮ್ಮ ಮಾತುಗಳ ಮೂಲಕ ತಿಳಿಯಪಡಿಸಿದರು.
ಯೋಗ ಅಧ್ಯಾಪಕ ವಿನಯಪಾಲ್ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು. ಮುಖ್ಯೋಪಾಧ್ಯಾಯ ಸತ್ಯನಾರಾಯಣ ಶರ್ಮ ಪಂಜಿತ್ತಡ್ಕ ದೀಪಬೆಳಗಿಸಿ ಚಾಲನೆ ನೀಡಿದರು. ಹಿರಿಯ ಅಧ್ಯಾಪಿಕೆ ಸರೋಜ ವಳಕ್ಕುಂಜ, ಅಧ್ಯಾಪಿಕೆ ಪವಿತ್ರ ಹಿತವಚನಗಳನ್ನು ನುಡಿದರು.





