ಮುಳ್ಳೇರಿಯ: ನೆಕ್ರಾಜೆ ಗ್ರಾಮದ ನಾರಂಪಾಡಿ ಶ್ರೀ ಉಮಾಮಹೇಶ್ವರ ಕ್ಷೇತ್ರದಲ್ಲಿ ಆರಂಭಗೊಂಡಿರುವ ಪುನ: ನವೀಕರಣ ಪುನ: ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶಾಭಿಷೇಕದ ಅಂಗವಾಗಿ ಮೂರನೇ ದಿನವಾದ ಮಂಗಳವಾರ ವಿವಿಧ ವೈದಿಕ, ಧಾರ್ಮಿಕ ಕಾರ್ಯಕ್ರಮಗಳು ನಡೆದವು.
ಬೆಳಿಗ್ಗೆ 6 ರಿಂದ ಗಣಪತಿಹೋಮ, ವಿವಿಧ ಶಾಂತಿಹೋಮಗಳು, 12.30 ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಸಂಜೆ 7 ರಿಂದ ಹೋಮ ಕಲಶಾಭಿಷೇಕ, ಅಂಕುರಪೂಜೆ, ತ್ರಿಕಾಲಪೂಜೆ, ಅನುಜ್ಞಾ ಕಲಶಪೂಜೆ, ಅಧಿವಾಸ ಹೋಮಗಳು, ಮಹಾಪೂಜೆ, ರಾತ್ರಿ ಪೂಜೆ ನಡೆಯಿತು. ಭಜನಾ ಮಂಟಪದಲ್ಲಿ ಬೆಳಿಗ್ಗೆ 8 ರಿಂದ ಭಜನಾ ಸಂಕೀರ್ತನೆ, 11.30ರಿಂದ 1.30ರ ವರೆಗೆ ಕುರುಂಬುಡೇಲು ಮಹಾಲಿಂಗ ಭಟ್ ಬೆಳ್ಳಾರೆ ಮತ್ತು ತಂಡದವರಿಂದ ನಾರಾಯಣೀಯಂ ಪಾರಾಯಣ ಗಮನಾರ್ಹವಾಗಿ ನೆರವೇರಿತು.
ಸಾಂಸ್ಕøತಿಕ ವೇದಿಕೆಯಲ್ಲಿ ಬೆಳಿಗ್ಗೆ 9.30ರಿಂದ ಸುಧಾಕರ ಕೋಟೆಕುಂಜತ್ತಾಯರಿಂದ ಹರಿಕಥಾ ಸಂಕೀರ್ತನೆ, ಅಪರಾಹ್ನ 1 ರಿಂದ ಯಕ್ಷಗಾನ ತಾಳಮದ್ದಳೆ, ಸಂಜೆ 4 ರಿಂದ ಕೈಕೊಟ್ಟಿಕಳಿ ಮತ್ತು ಸಂಘನೃತ್ಯ, ರಾತ್ರಿ 8 ರಿಂದ ವಿದುಷಿಃ ಡಾ.ವಿದ್ಯಾಲಕ್ಷ್ಮಿ ಬೇಳ ಅವರ ಶಿಷ್ಯವೃಂದದವರಿಂದ ನೃತ್ಯ ವೈಭವ ನಡೆಯಿತು.
ಇಂದಿನ ಕಾರ್ಯಕ್ರಮ:
ಬುಧವಾರ ಬೆಳಿಗ್ಗೆ 6 ರಿಂದ ಗಣಪತಿಹೋಮ, ತತ್ವಕಲಶಪೂಜೆ, ತತ್ವಹೋಮ, ತತ್ವಕಲಶಾಭಿಷೇಕ, ಅನುಜ್ಞಾ ಕಲಶಾಭಿಷೇಕ, ಅಂಕುರಪೂಜೆ, ತ್ರಿಕಾಲಪೂಜೆ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 7 ರಿಂದ ಅನುಜ್ಞಾಬಲಿ, ಕ್ಷೇತ್ರಪಾಲನಲ್ಲಿ ಅನುಜ್ಞಾ ಪ್ರಾರ್ಥನೆ, ಅಂಕುರಪೂಜೆ, ತ್ರಿಕಾಲಪೂಜೆ, ಬಿಂಬಶುದ್ಧಿ, ಕಲಶಪೂಜೆ, ಮಹಾಪೂಜೆ, ರಾತ್ರಿಪೂಜೆ, ಪ್ರಸಾದ ವಿತರಣೆ ನಡೆಯಲಿದೆ.
ಭಜನಾ ಮಂಟಪದಲ್ಲಿ ಬೆಳಿಗ್ಗೆ 8 ರಿಂದ ಸಂಜೆ 6ರ ವರೆಗೆ ವಿವಿಧ ತಂಡಗಳಿಂದ ಭಜನಾ ಸಂಕೀರ್ತನ ಸೇವೆಗಳು, 6ರಿಂದ ಕುಣಿತ ಭಜನೆ ನಡೆಯಲಿದೆ. ಸಾಂಸ್ಕøತಿಕ ವೇದಿಕೆಯಲ್ಲಿ ಬೆಳಿಗ್ಗೆ 9.30 ರಿಂದ ಭಕ್ತಿಸಂಗೀತ, 11 ರಿಂದ 12.30ರ ವರೆಗೆ ಸಾಹಿತ್ಯಗಾನ-ನೃತ್ಯ ವೈಭವ, 12.35ರಿಂದ 1ರ ವರೆಗೆ ಕೈಕೊಟ್ಟಿಕಳಿ, 1.ರಿಂದ 1.45ರ ವರೆಗೆ ಶಾಸ್ತ್ರೀಯ ಸಂಗೀತ ಕಚೇರಿ, ಅಪರಾಹ್ನ 2 ರಿಂದ 4.45ರ ವರೆಗೆ ಮೂಡಂಬೈಲು ವಾಗ್ದೇವಿ ತಂಡದಿಂದ ತಾಳಮದ್ದಳೆ, ಸಂಜೆ 5 ರಿಂದ 6.45ರ ವರೆಗೆ ಹರಿಕಥಾ ಸತ್ಸಂಗ, ಬಳಿಕ ಜಾನಪದ ನೃತ್ಯ ಮತ್ತು ರಾತ್ರಿ 9 ರಿಂದ ಮುಳ್ಳೇರಿಯ ಶ್ರೀಗಣೇಶ ಯಕ್ಷಗಾನ ಕೇಂದ್ರದವರಿಂದ ಯಕ್ಷಗಾನ ಬಯಲಾಟ ನಡೆಯಲಿದೆ.
ಸ್ವಯಂಸೇವಕರ ಅಹರ್ನಿಶಿ ಸೇವೆ:
ದಿನನಿತ್ಯ ನೂರಾರು ಜನರು ವಿವಿಧೆಡೆಗಳಿಂದ ಆಗಮಿಸುತ್ತಿದ್ದು ಸ್ವಾಗತದಿಂದ ತೊಡಗಿ ದೇವರದರ್ಶನ, ಪ್ರಸಾದ ವಿತರಣೆ, ಉಪಚಾರಗಳಲ್ಲಿ ಸ್ವಯಂಸೇವಕರ ತಂಡ ನಿರಂತರ ಕಾರ್ಯನಿರ್ವಹಿಸುತ್ತಿದೆ. ಪ್ರಸಾದ ಪ್ಯಾಕೆಟ್ ತಯಾರಿ, ಊಟೋಪಚಾರದ ತರಕಾರಿ ಹಚ್ಚುವಿಕೆ, ಬಡಿಸುವ ಸೇವೆಗಳಲ್ಲಿ ಭಕ್ತರ ತಂಡ ಉತ್ಸಾಹದಿಂದ ತೊಡಗಿಸಿಕೊಂಡಿರುವುದು ಶ್ಲಾಘನೀಯವೆನಿಸಿವೆ.




.jpg)
.jpg)
.jpg)
.jpg)
.jpg)
.jpg)
.jpg)
