ಕಾಸರಗೋಡು:: ಕಡಿಮೆ ಶಬ್ದ, ಆದರ್ಶ ಸಂದೇಶಗಳನ್ನು ನೀಡುವ ವಾಮನರೂಪಿ ಚುಟುಕು ಸಾಹಿತ್ಯಕ್ಕೆ ದೀರ್ಘವಾದ ಇತಿಹಾಸ ಇದೆ. ಸರ್ವಜ್ಞ ಸಹಿತ ಶರಣರ ವಚನಗಳು ಹಾಗೂ ಕಗ್ಗಗಳು ಚುಟುಕು ಸಾಹಿತ್ಯ ರಚನೆಗಳು ಎಂದು ಪತ್ರಕರ್ತ, ಸಾಹಿತಿ ವಿರಾಜ್ ಅಡೂರು ಹೇಳಿದರು.
ಅವರು ಕಾಸರಗೋಡಿನ ನುಳ್ಳಿಪ್ಪಾಡಿಯ ಸೀತಮ್ಮ ಪುರುಷ ನಾಯಕ ಕನ್ನಡ ಭವನ ಮತ್ತು ಗ್ರಂಥಾಲಯದ ಬಯಲು ರಂಗಮಂದಿರದಲ್ಲಿ ಡಾ. ವಾಮನ್ ರಾವ್ ಬೇಕಲ್ ಅವರ ಸ್ಥಾಪಕ ಸಂಚಾಲಕತ್ವದಲ್ಲಿ ರಚನೆಯಾದ ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿನ ಕಾಸರಗೋಡು ಜಿಲ್ಲಾ ಸಮಿತಿಯ ಪದಗ್ರಹಣ ಕಾರ್ಯಕ್ರಮದಲ್ಲಿ ಇತ್ತೀಚೆಗೆ ನಡೆದ ಚುಟುಕು ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಾಹಿತ್ಯ ಸಾಧಕನ ಕಾವ್ಯ ರಚನೆಯು ಚುಟುಕಿನಿಂದ ಆರಂಭವಾದರೆ ದೃಢವಾಗಿ ಬೆಳೆಯುತ್ತದೆ. ಈ ನಿಟ್ಟಿನಲ್ಲಿ ಚುಟುಕು ಸಾಹಿತ್ಯವು ಕನ್ನಡ ಸಾಹಿತ್ಯ ಸಾಗರದ ಮಹತ್ವದ ಗುಟುಕುಗಳು ಎಂದು ಅವರು ಹೇಳಿದರು.
ಕವಿಗೋಷ್ಠಿಯಲ್ಲಿ ಜಿಲ್ಲೆಯ ಕವಿಗಳಾದ ಕೆ ನರಸಿಂಹ ಭಟ್ ಏತಡ್ಕ, ಪ್ರಭಾವತಿ ಕೆದಿಲಾಯ ಪುಂಡೂರು, ಶಾರದಾ ಮೊಳೆಯಾರ್ ಎಡನೀರು, ಠಾಧಾಕೃಷ್ಣ ಭಟ್ ಕುರುಮುಜ್ಜಿ, ಪ್ರೊ.. ಲತಾ ಪ್ರಕಾಶ್ ರಾವ್ ಬೆಳ್ಳೂರಡ್ಕ, ಸುಶೀಲಾ ಕೆ ಪದ್ಯಾಣ, ನಿರ್ಮಲಾ ಶೇಷಪ್ಪ ಖಂಡಿಗೆ, ಶಶಿಕಲಾ ಟೀಚರ್ ಕುಂಬಳೆ, ಗಾಯತ್ರಿ ಪಳ್ಳತ್ತಡ್ಕ, ಗೀತಾ ಮನೋಜ್, ಮೇಘಾ ಶಿವರಾಜ್, ಗಿರೀಶ್ ಪಿ.ಎಂ. ಕಾಸರಗೋಡು, ಅನ್ನಪೂರ್ಣ ಎನ್ ಕುತ್ತಾಜೆ, ಶುಭಾಷಿಣಿ ಚಂದ್ರ ಕನ್ನಟಿಪಾರೆ, ಶ್ವೇತಾ ರಮೇಶ್ ಬೆಳ್ಳಿಪ್ಪಾಡಿ, ಜ್ಯೋತ್ಸ್ನಾ ಕಡಂದೇಲು. ಪ್ರಿಯಾ ಬಾಯಾರ್, ರೇಖಾ ರೋಷನ್ ಕಾಸರಗೋಡು, ಚಂಚಲಾಕ್ಷಿ ಶ್ಯಾಮ್ ಪ್ರಕಾಶ್, ಅಶ್ವಿನಿ ರಜನೀಶ್ ಕಾಸರಗೋಡು, ವನಜಾಕ್ಷಿ ಚಂಬ್ರಕಾನ, ಕಿಶನ್ ರಾಜ್ ಭಾಗವಹಿಸಿದ್ದರು. ಕನ್ನಡ ಭವನದ ಕಾರ್ಯದರ್ಶಿ ವಸಂತ ಕೆರೆಮನೆ ಸ್ವಾಗತಿಸಿ,. ಕನ್ನಡ ಭವನದ ನಿರ್ದೇಶಕ ಪ್ರೊ. ಎ ಶ್ರೀನಾಥ್ ವಂದಿಸಿದರು. ವಿಶಾಲಾಕ್ಷ ಪುತ್ರಕಳ ಕಾರ್ಯಕ್ರಮ ನಿರೂಪಿಸಿದರು. ಕವಿಗೋಷ್ಠಿಯಲ್ಲಿ ಭಾಗವಹಿಸಿದ ಕವಿಗಳಿಗೆ ಪುಸ್ತಕ ಸ್ಮರಣಿಕೆ ಹಾಗೂ ಅಭಿನಂದನಾ ಪತ್ರವನ್ನು ನೀಡಿ ಗೌರವಿಸಲಾಯಿತು.




.jpg)

