ಕಾಸರಗೋಡು: ಉದುಮ ಬಾರಾ ಪಲ್ಲಿತ್ತಟ್ಟು ಶ್ರೀ ಕೊತರ್‍ಂಬತ್ ತರವಾಡಿನಲ್ಲಿ ಪ್ರತಿಷ್ಠಾ ದಿನಾಚರಣೆ ಹಾಗೂ ಕುಟುಂಬ ಪುನರ್ಮಿಲನ, ಸನ್ಮಾನ ಸಮಾರಂಭ ಇತ್ತೀಚೆಗೆ ನಡೆಯಿತು.
ಕಣ್ಣೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯ ಡಾ. ಎ. ಅಶೋಕನ್ ಕಾರ್ಯಕ್ರಮ ಉದ್ಘಾಟಿಸಿದರು. ಉದುಮ ಗ್ರಾಮ ಪಂಚಾಯತಿ ಅಧ್ಯಕ್ಷೆ ಪಿ.ಲಕ್ಷ್ಮಿ ಮುಖ್ಯ ಅತಿಥಿಗಳಾಗಿದ್ದರು. ತರವಾಡ ಸಮಿತಿ ಅಧ್ಯಕ್ಷ ಕೃಷ್ಣನ್ ಅಂಪಾಂಗಡ್ ಅಧ್ಯಕ್ಷತೆ ವಹಿಸಿದ್ದರು. ಅಲಾಮಿ ಪಾದೂರ್, ಸುನಿಲ್ ಕುಮಾರ್, ಕಮಲಾಕ್ಷನ್ ಕರಿಚೇರಿ, ಶ್ರೀಧರನ್ ತೇರ್ಕುನ್ನು, ಸದಾನಂದನ್ ಕಾವೂರ್ ಮಂಗಳೂರು, ಕೃಷ್ಣನ್ ಪಳ್ಳಿತ್ತಟ್ಟು ನಾರಾಯಣನ್ ಅಯಂಪಾರ, ರಾಮಕೃಷ್ಣನ್ ವಾಜಕ್ಕೋಡ್, ಕಾತ್ರ್ಯಾಯಿನಿ ಪೆರಿಯ, ಪುಷ್ಪಾ ತಚ್ಚಂಗಾಡ್, ರವಿ ಕಾನತ್ತೂರ್, ಬಾಲಕೃಷ್ಣನ್ ಉರುಳಂಕೋಡಿ, ಮತ್ತು ರಾಧಾ ಪುಲ್ಲೂರ್ ಮಾತನಾಡಿ ಶುಭ ಹಾರೈಸಿದರು. ಪ್ರತಿಭಾವಂತ ವಿದ್ಯಾರ್ಥಿಗಳನ್ನು ಈ ಸಂದರ್ಭ ಸನ್ಮಾನಿಸಲಾಯಿತು. ಹರಿದಾಸ್ ಪೆರುಂಪಾಲ ಸ್ವಾಗತಿಸಿ, ಸತ್ಯನ್ ಕಾನತ್ತೂರ್ ವಂದಿಸಿದರು.




.jpg)

