ಬದಿಯಡ್ಕ: ಎಡನೀರು ಸಮೀಪದ ಕನ್ನಡಿಪಾರ ಶ್ರೀಅಯ್ಯಪ್ಪ ಭಜನಾ ಮಂದಿರದ ಅಭಿವೃದ್ಧಿ ಚಟುವಟಿಕೆಗಳಿಗಾಗಿ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಕೊಡಮಾಡಿದ 1.5 ಲಕ್ಷ ರೂ.ಗಳ ಆರ್ಥಿಕ ನೆರವನ್ನು ಇತ್ತೀಚೆಗೆ ಮಂದಿರದ ಪದಾಧಿಕಾರಿಗಳಿಗೆ ಹಸ್ತಾಂತರಿಸಲಾಯಿತು.
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ಯೋಜನಾಧಿಕಾರಿ ಮುಖೇಶ್ ಅವರು ಚೆಕ್ ಹಸ್ತಾಂತರಿಸಿದರು. ಈ ಸಂದರ್ಭ ಯೋಜನೆಯ ವಲಯ ಮೇಲ್ವಿಚಾರಕಿ ಸುಮಲತ, ಸ್ಥಳೀಯ ಒಕ್ಕೂಟದ ಅಧ್ಯಕ್ಷ ಸಂತೋಷ್, ಜನಜಾಗೃತಿ ವೇದಿಕೆಯ ಸದಸ್ಯ ಪ್ರೊ.ಎ.ಶ್ರೀನಾಥ್, ಮಂದಿರದ ಪದಾಧಿಕಾರಿಗಳಾದ ಗೋವಿಂದ ಭಟ್, ಗೋಪಾಲನ್ ನಾಯರ್, ಧನಪಾಲ್ ಕೆ., ಮಣಿಕಂಠನ್, ಜನಾರ್ದನ ಬಲ್ಲಾಳ್, ವಿನು, ವಿವೇಕ್, ವಿನಯಪಾಲ್ ಕೆ. ಉಪಸ್ಥಿತರಿದ್ದರು.




.jpg)

