HEALTH TIPS

ಬದಿಯಡ್ಕದಲ್ಲಿ 23 ರಂದು ಮಹಾಕುಂಭ ಮೇಳದ ಜಲ ವಿತರಣೆ

ಬದಿಯಡ್ಕ: 144 ವರ್ಷಗಳಿಗೊಮ್ಮೆ ನಡೆಯುವ ಮಹಾಕುಂಭ ಮೇಳದ ಪವಿತ್ರ ಜಲವನ್ನು ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಟ್ರಸ್ಟ್ ಹಾಗೂ ಮಂದಿರ ನಿರ್ಮಾಣ ಸಮಿತಿ ಶಬರಿಗಿರಿ ಬದಿಯಡ್ಕ ಇಲ್ಲಿ ಶಿವರಾತ್ರಿಯ ಪುಣ್ಯ ದಿನ ಫೆ.23ರಂದು ಭಾನುವಾರು ವಿತರಿಸಲಾಗುವುದು. ಕೋಟ್ಯಂತರ ಭಗವದ್ಭಕ್ತರು ಈ ಪುಣ್ಯಕಾಲದಲ್ಲಿ ಸಾಹಿ ಸ್ನಾನಗೈದು ಪುನೀತರಾಗಿರುತ್ತಾರೆ. ಈ ಅವಕಾಶದಿಂದ ವಂಚಿತರಾಗಿರುವವರಿಗೂ ಈ ಪವಿತ್ರ ಜಲ ಲಭಿಸಬೇಕೆಂಬ ಉದ್ದೇಶದೊಂದಿಗೆ ಬದಿಯಡ್ಕದ ನರೇಂದ್ರ ಬಿ.ಎನ್., ಗಿರೀಶ್ ರೈ ವಳಮಲೆ, ಪ್ರತೀಕ್ ಆಳ್ವ ಪೆರಡಾಲ ಅವರು ಪ್ರಯಾಗರಾಜ್ ಕುಂಭಮೇಳದಿಂದ ಪವಿತ್ರ ಜಲವನ್ನು ಸಂಗ್ರಹಿಸಿ ತಂದಿದ್ದರು. ಶಿವರಾತ್ರಿಯಂದು ಈ ಪುಣ್ಯ ಜಲವನ್ನು ಬೆಳಗ್ಗೆ 10 ಕ್ಕೆ ವಿತರಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries