ಉಪ್ಪಳ: ಕ್ಯಾಂಪ್ಕೋದ ಸಕ್ರೀಯ ಸದಸ್ಯರಿಗೆ ಸಹಾಯ ಹಸ್ತ (ಸಾಂತ್ವಾನ) ಯೋಜನೆಯಂತೆ ಕ್ಯಾಂಪ್ಕೋ ಬಾಯಾರಿನ ಸಕ್ರೀಯ ಸದಸ್ಯ ಬಾಬು ಮೂಲ್ಯ ವಾದ್ಯಪಡ್ಪು ಅವರ ಕೃಷಿ ತೋಟದಲ್ಲಿ ತೆಂಗಿನಕಾಯಿ ಕೀಳುವ ವೇಳೆ ಹೆಜ್ಜೇನು ದಾಳಿಯ ಆಘಾತದಿಂದ ಮೃತರಾದ ದಿ.ಚಂದ್ರಹಾಸ ಕಿದೂರು ಅವರ ಪತ್ನಿ ಶಶಿಕಲಾರಿಗೆ ಕ್ಯಾಂಪ್ಕೋ ಉಪಾಧ್ಯಕ್ಷ ಶಂಕರನಾರಾಯಣ ಭಟ್ ಖಂಡಿಗೆಯವರು ರೂ.50,000 ದ ಸಹಾಯಧನ ಚೆಕ್ ನ್ನು ಗುರುವಾರ ವಿತರಿಸಿದರು.
ಈ ಸಂದರ್ಭದಲ್ಲಿ ಕ್ಯಾಂಪ್ಕೋ ನಿರ್ದೇಶಕರುಗಳಾದ ಬಾಲಕೃಷ್ಣ ರೈ ಬಾನೊಟ್ಟು, ಡಾ. ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ, ಸುರೇಶ್ ಕುಮಾರ್ ಶೆಟ್ಟಿ ಪೂಕಟ್ಟೆ, ಕ್ಯಾಂಪ್ಕೋ ಬದಿಯಡ್ಕ ವಲಯ ಪ್ರಬಂಧಕ ಚಂದ್ರ ಯಂ, ಬಾಯಾರು ಶಾಖಾ ಪ್ರಬಂಧಕ ರಮೇಶ್ ವೈ, ಸಕ್ರೀಯ ಸದಸ್ಯರುಗಳಾದ ಬಾಬು ಮೂಲ್ಯ ವಾದ್ಯಪಡ್ಪು, ವಿಶ್ವನಾಥ ಮೂಲ್ಯ ಮಾಣಿಪ್ಪಾಡಿ ,ಮಾಧವ ಕಿದೂರು ಉಪಸ್ಥಿತರಿದ್ದರು. ಬಡ ಕುಟುಂಬಕ್ಕೆ ಈ ಮೊತ್ತದ ಸಹಾಯ ನೀಡಿದ ಕ್ಯಾಂಪ್ಕೋ ಆಡಳಿತ ಸಮಿತಿಗೆ ಮತ್ತು ಮುತುವರ್ಜಿ ವಹಿಸಿದ ನಿರ್ದೇಶಕರೆಲ್ಲರಿಗೆ ಕೃಷಿಕರಾದ ಬಾಬು ಮೂಲ್ಯ ಕೃತಜ್ಞತೆಗಳನ್ನು ತಿಳಿಸಿದರು.




.jpg)

