ಮಂಜೇಶ್ವರ: ಕಡಂಬಾರ್‍ನಲ್ಲಿ ಯುವಕನನ್ನು ಅಪಹರಿಸಿ ಹಲ್ಲೆಗೈದು ಮೊಬೈಲ್, ಚಿನ್ನದ ಸರ ಹಾಗೂ ನಗದು ದೋಚಿದ ಪ್ರಕರಣಕ್ಕೆ ಸಂಬಂಧಿಸಿ ಕುಂಬಳೆ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ತಂಡ ನಡೆಸಿದ ಹಲ್ಲೆಯಿಂದ ಕಡಂಬಾರ್ ಅರಿಮಲೆ ನಿವಾಸಿ ಪ್ರವೀಣ್ ಎ ಎಂಬವರು ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.
ಕಡಂಬಾರಿನಲ್ಲಿ ನಡೆದುಹೋಗುತ್ತಿದ್ದಾಗ ಆಟೋರಿಕ್ಷಾ, ಕಾರು ಹಾಗೂ ಬೈಕಲ್ಲಿ ಆಗಮಿಸಿದ 15ಮಂದಿಯ ತಂಡ ಪ್ರವೀಣ್ ಅವರನ್ನು ಬಲವಂತವಾಗಿ ಆಟೋರಿಕ್ಷಾಕ್ಕೆ ಹತ್ತಿಸಿ ಬಂದ್ಯೋಡು ಅಡ್ಕ ವೀರನಗರದ ಜನವಸವಿಲ್ಲದ ಪ್ರದೇಶಕ್ಕೆ ಕರೆದೊಯ್ದು ಹಲ್ಲೆಗೈದ ನಂತರ ಕತ್ತಿನಲ್ಲಿದ್ದ ಒಂದು ಪವನು ತೂಕದ ಚಿನ್ನದ ಸರ, ಜೇಬಲ್ಲಿದ್ದ 12, 200ರೂ ನಗದು ಹಾಗೂ ಮೊಬೈಲ್ ಕಸಿದು ತಂಡ ಪರಾರಿಯಾಗಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ತಂಡ ಪರಾರಿಯಾದ ನಂತರ ಪ್ರವೀಣ್ ಅವರು ಸ್ನೇಹಿತನ ಸಹಾಯದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ.




