ಕಾಸರಗೋಡು: ಉದ್ಯಮಿ ಎಂ.ಸಿ ಅಬ್ದುಲ್ ಗಫೂರ್ ಹಾಜಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ವಿದೇಶದಲ್ಲಿ ತಲೆಮರೆಸಿಕೊಂಡಿರುವ ಇಬ್ಬರು ಆರೋಪಿಗಳ ಪತ್ತೆಗಾಗಿ ಪೊಲೀಸರು ಲುಕೌಟ್ ನೊಟೀಸ್ ಜಾರಿಗೊಳಿಸಿದ್ದಾರೆ.
ಪಳ್ಳಿಕೆರೆ ಪೂಚಕ್ಕಾಡ್ ನಿವಾಸಿ ಉವೈಸ್ ಹಾಗೂ ಶಮ್ಮಾಸ್ ಎಂಬವರಿಗೆ ತಿರುವನಂತಪುರ ಕ್ರ್ಯಮ ಬ್ರಾಂಚ್ ಹೆಡ್‍ಕ್ವಾರ್ಟರ್ಸ್ ಮೂಲಕ ಸಂಬಂಧಪಟ್ಟ ರಾಯಭಾರ ಕಚೇರಿಗಳಿಗೆ ಈ ಲುಕೌಟ್ ನೋಟೀಸು ಕಳುಹಿಸಿಕೊಡಲಾಗಿದೆ. ಪ್ರಕರಣದ ತನಿಖೆ ನಡೆಸುತ್ತಿರುವ ಡಿಸಿಆರ್‍ಬಿ ಡಿವೈಎಸ್‍ಪಿ ಕೆ.ಜಿ ಜಾನ್ಸನ್ ನೇತೃತ್ವದಲ್ಲಿ ನೋಟೀಸು ನೀಡಲಾಗಿದೆ.




