ಕಾಸರಗೋಡು: ಆಧುನಿಕ ಶಿಕ್ಷಣ ಪದ್ಧತಿಯಿಂದ ಸಮಾಜದಲ್ಲಿ ಆಮೂಲಾಗ್ರ ಬದಲಾವಣೆಕಂಡುಕೊಳ್ಳಲು ಸಾಧ್ಯ ಎಂದು ರಾಜ್ಯ ಶಿಕ್ಷಣ ಹಾಗೂ ಕಾರ್ಮಿಕ ಖಾತೆ ಸಚಿವ ವಿ. ಶಿವನ್ ಕುಟ್ಟಿ ತಿಳಿಸಿದ್ದಾರೆ.
ಅವರು ಬೋವಿಕ್ಕಾನ ಬಿ.ಎ.ಆರ್. ಹೈಯರ್ ಸೆಕೆಂಡರಿ ಶಾಲೆಯ ನೂತನ ಕಟ್ಟಡವನ್ನು ನಿನ್ನೆ ಉದ್ಘಾಟಿಸಿ ಮಾತನಾಡಿದರು.
ಉದುಮ ಶಾಸಕ ವಕೀಲ ಸಿ.ಎಚ್. ಕುಞಂಬು ಅಧ್ಯಕ್ಷತೆ ವಹಿಸಿದ್ದರು. ಕಾಸರಗೋಡು ಸಂಸದ ರಾಜಮೋಹನ್ ಉಣ್ಣಿತ್ತಾನ್, ಶಾಸಕರಾದ ಇ. ಚಂದ್ರಶೇಖರನ್, ಎನ್. ಎ. ನೆಲ್ಲಿಕ್ಕುನ್ನು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
ಕಾರಡ್ಕ ಬ್ಲಾಕ್ ಪಂಚಾಯತ್ ಅಧ್ಯಕ್ಷ ಸಿಜಿ ಮ್ಯಾಥ್ಯೂ, ಮುಳಿಯಾರ್ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಿನಿ ಪಿ.ವಿ., ಕಾರಡ್ಕ ಬ್ಲಾಕ್ ಪಂಚಾಯಿತಿ ಸದಸ್ಯ ಎಂ. ಕುಞಂಬು ನಂಬಿಯಾರ್,
ಮುಳಿಯಾರ್ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಜನಾರ್ದನನ್. ಎ., ಮುಳಿಯಾರ್ ಗ್ರಾಮ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷೆ ಅನೀಸ್ ಮನ್ಸೂರ್ ಮಲ್ಲತ್, ಮುಳಿಯಾರ್ ಗ್ರಾಮ
ಪಂಚಾಯಿತಿ ಸದಸ್ಯ ಅಬ್ಬಾಸ್ ಕೊಳಚೆಪ್ಪು, ಜಿಲ್ಲಾ ಶೀಕ್ಷಣ ಉಪ ನಿರ್ದೇಶಕ ಮಧುಸೂದನನ್ ಎಂ, ಕಾಸರಗೋಡು ಎ.ಇ.ಒ ಅಗಸ್ಟಿನ್ ಬರ್ನಾರ್ಡ್ ಮೊಂತೆರೋ, ರಕ್ಷಕ ಶಿಕ್ಷಕ
ಸಮಿತಿಯ ಅಧ್ಯಕ್ಷ ಮಣಿಕಂಟನ್ ಓಂಬೈಲ್, ಯು. ಪಿ. ವಿಭಾಗದ ರಕ್ಷಕ ಶಿಕ್ಷಕ ಸಮಿತಿಯ ಅಧ್ಯಕ್ಷ ಇಸ್ಮಾಯಿಲ್ ಆಲೂರ್, ಶಾಲಾ ಮುಖ್ಯೋಪಾಧ್ಯಾಯರಾದ ಕೆ. ನಾರಾಯಣನ್, ಯು. ಪಿ. ವಿಭಾಗದ ಶಾಲಾ ಮುಖ್ಯ ಶೀಕ್ಷಕಿ ಪ್ರೇಮ ಬಿಂದು ಟೀಚರ್, ವಿವಿಧ ಪಕ್ಷಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು. ಶಾಲಾ ಪ್ರಬಂಧಕ ಗಂಗಾಧರನ್ ನಾಯರ್ ಪಾಡಿ ಸ್ವಾಗತಿಸಿದರು. ಪ್ರಾಂಶುಪಾಲ ಮೆಜೋ ಜೋಸೆಫ್ ವಿ. ಅವರು ವಂದಿಸಿದರು.





