ಮಂಜೇಶ್ವರ: ಮಂಜೇಶ್ವರ ಗೋವಿಂದ ಪೈ ಕಾಲೇಜಿನಲ್ಲಿ ಭಾಷಾಂತರ ಅಧ್ಯಯನ ವಿಭಾಗ ಹಂಪಿ ವಿಶ್ವವಿದ್ಯಾನಿಲಯ ಹಾಗೂ ಗೋವಿಂದ ಪೈ ಕಾಲೇಜಿನ ಕನ್ನಡ ವಿಭಾಗದ ಜಂಟಿ ಆಶ್ರಯದಲ್ಲಿ ಭಾಷಾಂತರಕಾರರ ನಾಲ್ಕನೇ ಸಮಾವೇಶ ಫೆ 17 ರಿಂದ 19 ರವರೆಗೆ ಕಾಲೇಜಿನ ಕ್ಯಾಂಪಸ್ ಸಭಾಂಗಣದಲ್ಲಿ ನಡೆಯಲಿದೆ.
ಫೆ 17 ರಂದು ನಾಲ್ಕು ಪುಸ್ತಕಗಳ ಬಿಡುಗಡೆ ಕಾರ್ಯಕ್ರಮ ನಡೆಯಲಿದ್ದು ಹಂಪಿ ಕನ್ನಡ ವಿಶ್ವವಿದ್ಯಾನಿಲಯ ಕುಲಪತಿ ಡಾ. ಡಿ.ವಿ. ಪರಮಶಿವ ಮೂರ್ತಿ ಉದ್ಘಾಟಿಸುವರು. ಕಾಲೇಜು ಪ್ರಾಂಶುಪಾಲ ಡಾ ಮುಹಮ್ಮದಾಲಿ ಅಧ್ಯಕ್ಷತೆ ವಹಿಸುವರು. ಕಾರ್ಯಕ್ರಮದಲ್ಲಿ ಸುಭಾಷ್ ಪಟ್ಟಾಜೆ, ವಿಶ್ವನಾಥ ನಾಗಟಾಣ, ಮೋಹನ್ ಕುಂಟಾರು, ಎಸ್ ಡಿ ಎಂ ಕಾಲೇಜು ಉಜಿರೆ ಸಹ ಪ್ರಾಧ್ಯಾಪಕ ಡಾ ರಾಜಶೇಖರ ಹಳೆಮನೆ, ಡಾ ಅರುಣ್ ಕುಮಾರ್ ಎಸ್ ಆರ್ ಉಡುಪಿ, ವಿಕಾಸ್ ಹೊಸಮನಿ ತಾರನಾಥ ವರ್ಕಾಡಿ ಮೊದಲಾದವರು ಉಪಸ್ಥಿತರಿರುವರು.
ಫೆ 18 ರಂದು ಬೆಳಗ್ಗೆ ಬಾಷಂತರಕಾರರ ನಾಲ್ಕನೇ ಸಮಾವೇಶದ ಉದ್ಘಾಟನೆಯನ್ನು ಹಂಪಿ ಕನ್ನಡ ವಿಶ್ವವಿದ್ಯಾನಿಲಯ ಕುಲಪತಿ ಡಾ. ಡಿ.ವಿ. ಪರಮಶಿವ ಮೂರ್ತಿ ನಿರ್ವಹಿಸಲಿದ್ದು ಕಾಲೇಜು ಪ್ರಾಚಾರ್ಯರಾದ ಡಾ ಮುಹಮ್ಮದಾಲಿ ಅಧ್ಯಕ್ಷತೆ ವಹಿಸುವರು. ಕಾರ್ಯಕ್ರಮದಲ್ಲಿ ವಿಮರ್ಶಕರಾದ ಯು ಮಹೇಶ್ವರಿ, ಕಣ್ಣುರು ವಿವಿ ಸಿಂಡಿಕೇಟ್ ಸದಸ್ಯರಾದ ಸಜಿತ್ ಕುಮಾರ್, ಉಪ ಪ್ರಾಂಶುಪಾಲರಾದ ಸಚಿಂದ್ರನ್, ಅಗ್ನೇಶಾಯಿ, ಡಾ ಎಂ ಮಲ್ಲಿಕಾರ್ಜುನ ಗೌಡ, ಕಾಲೇಜು ಯುನಿಯನ್ ಚೆಯರ್ಮೇನ್ ದಾವೂದು, ಎಂ ಮೋಹನ ಕುಂಟಾರ್ , ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾದ ಶಿವಶಂಕರ್ ಹಾಗೂ ಇನ್ನಿತರ ಗಣ್ಯರು ಉಪಸ್ಥಿತರಿರುವರು.
ಫೆ 19 ರಂದು ನಡೆಯುವ ಸಮಾರೋಪ ಸಮಾರಂಭದಲ್ಲಿ ಹಂಪಿ ವಿಶ್ವವಿಧ್ಯಾನಿಲಯದ ಹಿರಿಯ ಪ್ರಾಧ್ಯಾಪಕರಾದ ಡಾ ಎ ಮೋಹನ ಕುಂಟಾರ್ ಅಧ್ಯಕ್ಷತೆಯನ್ನು ವಹಿಸುವರು. ತಾಳ್ತಾಜೆ ವಸಂತ ಕುಮಾರ್, ಡಾ ಪ್ರಮೀಳ ಮಾಧವ್, ಕಾಸರಗೋಡು ಚಿನ್ನಾ, ಕಸಾಪ ಕೇರಳ ಘಟಕ ಅಧ್ಯಕ್ಷ ಜಯಪ್ರಕಾಶ್ ತೊಟ್ಟತ್ತೋಡಿ, ಡಾ ಸುಜಿತ್ ಎಸ್, ಜಯಂತಿ ಕೆ, ಕಾಲೇಜಿನ ಸುಪರಿಂಟೆಂಡೆಂಟ್ ದಿನೇಶ್ ಕೆ ಎಸ್ ಉಪಸ್ಥಿತರಿರುವರು.




