ಕಾಸರಗೋಡು: ಕೇರಳ ಸರ್ಕಾರದ ಉನ್ನತ ಶಿಕ್ಷಣ ಇಲಾಖೆಯು 'ವಿಜ್ಞಾನ ಕೇರಳ' ಯೋಜನೆಯ ಅಂಗವಾಗಿ ಉದ್ಯೋಗ ಮೇಳ ಅಸಾಪ್ ಕೇರಳ, ಕಾಸರಗೋಡು ಕಮ್ಯೂನಿಟಿ ಸ್ಕಿಲ್ ಪಾರ್ಕ್‍ನಲ್ಲಿ ಫೆ. 15ರಂದು ನಡೆಯಲಿದೆ.
ಪ್ರಮುಖ ಕಂಪನಿಗಳು ಭಾಗವಹಿಸುವ ಉದ್ಯೋಗ ಅಭಿಯಾನದಲ್ಲಿ, ಉದ್ಯೋಗಾರ್ಥಿಗಳಿಗೆ ವಿವಿಧ ಕ್ಷೇತ್ರಗಳಲ್ಲಿ ಅನೇಕ ಉದ್ಯೋಗಾವಕಾಶ ಲಭ್ಯವಾಗಲಿದೆ. ಆಸಕ್ತ ಉದ್ಯೋಗಾರ್ಥಿಗಳು 15ರಂದು ಬೆಳಗ್ಗೆ 9.30 ಕ್ಕೆ ಬಯೋಡೇಟಾ ಮತ್ತು ಸಂಬಂಧಿತ ಪ್ರಮಾಣಪತ್ರಗಳ ಸಹಿತ ಕಾಸರಗೋಡು ವಿದ್ಯಾನಗರದ ಕಮ್ಯೂನಿಟಿ ಸ್ಕಿಲ್ ಪಾರ್ಕ್ ಗೆ ತಲುಪಬೇಕು. ಉದ್ಯೋಗಾರ್ಥಿಗಳಿಗೆ ಈ ಅವಕಾಶವನ್ನು ಸಂಪೂರ್ಣವಾಗಿ ಉಚಿತವಾಗಿ ಪಡೆಯಬಹುದು. ನೋಂದಣಿಗಾಗಿ 9447326319 ಎಂಬ ನಂಬರಿಗೆ ವಾಟ್ಸ್ ಆಪ್ ಮಾಡಬಹುದು.
ಅಂದು ಸ್ಪಾಟ್ ನೋಂದಣಿ ಸೌಲಭ್ಯವೂ ಇರಲಿದ್ದು, ಅಭ್ಯರ್ಥಿಗಳು ಒಂದಕ್ಕಿಂತ ಹೆಚ್ಚು ರೆಸ್ಯೂಮ್ ಮತ್ತು ಪ್ರಮಾಣಪತ್ರದ ಪ್ರತಿಗಳನ್ನು ಜತೆಗಿರಿಸುವಂತೆ ಪ್ರಕಟಣೆ ತಿಳಿಸಿದೆ.






