ಮುಳ್ಳೇರಿಯ: ನೆಕ್ರಾಜೆ ಗ್ರಾಮದ ನಾರಂಪಾಡಿ ಶ್ರೀ ಉಮಾಮಹೇಶ್ವರ ಕ್ಷೇತ್ರದಲ್ಲಿ ಜೀರ್ಣೋದ್ಧಾರ ಕೆಲಸಗಳು ಪೂರ್ತಿಗೊಂಡು ಫೆ.2ರಿಂದ ಆರಂಭಗೊಂಡು 10ರ ತನಕ ಪುನ: ನವೀಕರಣ ಪುನ: ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶಾಭಿಷೇಕ, 11ರಿಂದ 16ರ ತನಕ ವಾರ್ಷಿಕ ಜಾತ್ರಾಮಹೋತ್ಸವ ಜರುಗಲಿದೆ. ಬ್ರಹ್ಮಶ್ರೀ ದೇಲಂಪಾಡಿ ಗಣೇಶ ತಂತ್ರಿ ಅವರ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದು ಬ್ರಹ್ಮಕಲಶಾಭಿಷೇಕ ಸಮಿತಿ ಅಧ್ಯಕ್ಷ ನಿತ್ಯಾನಂದ ಶೆಣೈ ಬದಿಯಡ್ಕ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ನಾರಂಪಾಡಿ ಕ್ಷೇತ್ರವು ಅತೀ ಪುರಾತನ, ಪ್ರಸಿದ್ಧ ಹಾಗೂ ನಾಲ್ಕು ಉಪದೇವಾಲಯಗಳಲ್ಲಿ ಒಂದಾಗಿದೆ. ಶ್ರೀ ಕ್ಷೇತ್ರದಲ್ಲಿ ಶ್ರೀ ಮಹೇಶ್ವರ, ಶ್ರೀ ಉಮಾ ದೇವರು ಉಪದೇವರುಗಳಾಗಿ ಗಣಪತಿ, ದಕ್ಷಿಣಾಮೂರ್ತಿ ದೇವರು, ಅಲ್ಲದೇ ಶ್ರೀ ನಾಗ, ಶ್ರೀ ಪೂಮಾಣಿ-ಕಿನ್ನಿಮಾಣಿ, ಗುಳಿಗ, ಧೂಮಾವತೀ ಪರಿವಾರ ದೈವಗಳ ಸಾನ್ನಿಧ್ಯಗಳಿಂದ ನೆಲೆಕೊಂಡಿದೆ. ಫೆ. 3ರಂದು ಬೆಳಗ್ಗೆ 10ಕ್ಕೆ ಸಮಸ್ಕ್ರತಿಕ ಕಾರ್ಯಕ್ರಮಗಳನ್ನು ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸವಾಮೀಜಿ ಉದ್ಘಾಟಿಸುವರು. ಫೆ. 7ರಂದು ಬೆಳಗ್ಗೆ 5ಕ್ಕೆ 108ಕಾಯಿ ಗಣಹೋಮ, 9.55ಕ್ಕೆ ಶ್ರೀ ಉಮಾಮಹೇಶ್ವರ ಮತ್ತು ಪರಿವಾರ ದೇವರ ಪ್ರತಿಷ್ಠೆ ನಡೆಯುವುದು. ಫೆ. 10ರಂದು 6ಕ್ಕೆ ಸಹಸ್ರ ಬ್ರಹ್ಮಕಲಶಾಭಿಷೇಕ ನಡೆಯುವುದು. ವಿವಿಧ ದಿವಸಗಳಲ್ಲಿ ನಡೆಯುವ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಶ್ರೀಮಾಣಿಲ, ಶ್ರೀ ಒಡಿಯೂರು ಹಾಗೂ ಉಪ್ಪಳ ಕೊಂಡೆವೂರುಶ್ರೀಗಳು ಆಶೀರ್ವಚನ ನೀಡುವರು. ಫೆ. 11ರಿಂದ 16 ವರೆಗೆ ವಾರ್ಷಿಕ ಜಾತ್ರಾ ಮಹೋತ್ಸವ ನಡೆಯುವುದು.
ಉತ್ಸವದ ಮರು ದಿನ ಶ್ರೀ ಧೂಮಾವತೀ ದೈವದ ನರ್ತನಸೇವೆ ನಡೆಯುವುದು. ಕಾರ್ಯಕ್ರಮದ ಯಶಸ್ವಿಗಾಗಿ ಬ್ರಹ್ಮಕಲಶಾಭಿಷೇಕ ಸಮಿತಿ ಹಾಗೂ ಉಪಸಮಿತಿಗಳನ್ನು ರಚಿಸಲಾಗಿದೆ ಎಂದು ತಿಳಿಸಿದರು. ದ್ದಿಗೋಷ್ಠಿಯಲ್ಲಿ ಬ್ರಹ್ಮಕಲಶಾಭಿಷೇಕ ಸಮಿತಿ ಪ್ರಧಾನ ಕಾರ್ಯದರ್ಶಿ ಬಾಲಕೃಷ್ಣ ಮಾಸ್ಟರ್ ನಾರಂಪಾಡಿ, ಶ್ರೀ ಕ್ಷೇತ್ರ ಸೇವಾ ಸಮಿತಿ ಅಧ್ಯಕ್ಷ ಸುಬ್ರಹ್ಮಣ್ಯ ಭಟ್ ತಲೇಕ, ಬ್ರಹ್ಮಕಲಶಾಭಿಷೇಕ ಸಮಿತಿ ಕೋಶಾಧಿಕಾರಿ ಸೀತಾರಾಮ ಕುಂಜತ್ತಾಯ, ಪ್ರಚಾರ ಸಮಿತಿ ಅಧ್ಯಕ್ಷ ಕೆ.ಗಂಗಾಧರ್, ಸಂಚಾಲಕ ಪ್ರಮೋದ್ ಬಿ.ಎಸ್. ಉಪಸ್ಥಿತರಿದ್ದರು.




