ಮಂಜೇಶ್ವರ: ಕನ್ನಡ ಸಾಹಿತ್ಯ ಪರಿಷತ್ ಗಡಿನಾಡ ಘಟಕ ಕಾಸರಗೋಡು ವತಿಯಿಂದ ನಡೆಯುವ ಮಾಸಿಕ ಹಿರಿಯ ಸಾಧಕರ ಕಡೆಗೆ ಕನ್ನಡ ಸಾಹಿತ್ಯ ಪರಿಷತ್ತಿನ ನಡಿಗೆ ಭಾಗವಾಗಿ ಮಂಜೇಶ್ವರದ ಉದ್ಯಾವರ ಮಾಡದ ಪುಸ್ತಕಗಳ ಸರದಾರ ಸುರೇಂದ್ರ ಕೋಟ್ಯಾನ್ ರವರನ್ನು ಶುಕ್ರವಾರ ಗೌರವಿಸಿ ಸನ್ಮಾನಿಸಲಾಯಿತು.
ಗಡಿನಾಡು ಕಾಸರಗೋಡಿನಲ್ಲಿ ಅನೇಕ ವಿಶಿಷ್ಟ ಪ್ರತಿಭೆಗಳು ತೆರೆಮರೆಯಲ್ಲಿದ್ದಾರೆ. ವಯೋ ಸಹಜವಾಗಿ ನೇಪತ್ಯಕ್ಕೆ ಸರಿದ ಹಿರಿಯ ಸಾಧಕರಿದ್ದಾರೆ. ಅವರನ್ನು ಗುರುತಿಸುವ ಕಾರ್ಯ ಕ.ಸಾ.ಪ ವತಿಯಿಂದ ಕಳೆದ ಒಂದು ವರ್ಷಗಳಿಂದ ನಿರಂತರವಾಗಿ ನಡೆಯುತ್ತಿದೆ. ಈ ಕಾರ್ಯವನ್ನು ಮುಂದಕ್ಕೂ ಮುಂದುವರಿಸುವ ಯೋಜನೆ ನಮ್ಮಲ್ಲಿ ಇದೆ ಎಂದು ಕ.ಸಾ.ಪ ಅಧ್ಯಕ್ಷ ಡಾ.ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ ಅಭಿಪ್ರಾಯ ಪಟ್ಟರು.
ಈ ಸಂದರ್ಭ ಕ.ಸಾ.ಪ ಗೌರವ ಕಾರ್ಯದರ್ಶಿ ಶೇಖರ ಶೆಟ್ಟಿ ಬಾಯಾರು, ಸಾಹಿತಿ ಮತ್ತು ಪ್ರಸಂಗಕರ್ತ ಯೋಗೀಶ್ ರಾವ್ ಚಿಗುರುಪಾದೆ, ಸಾಮಾಜಿಕ ಧಾರ್ಮಿಕ ಮುಂದಾಳು ಹರೀಶ್ ಶೆಟ್ಟಿ ಮಾಡ, ಜಯಪ್ರಕಾಶ್ ಶೆಟ್ಟಿ ಅಂಗಡಿದಾರು, ಪ್ರಕಾಶ್ ಕಣ್ವತೀರ್ಥ, ಹೇಮಾವತಿ ಸುರೇಂದ್ರ ಕೋಟ್ಯಾನ್ ಉಪಸ್ಥಿತರಿದ್ದರು.




.jpg)
