ಪೆರ್ಲ: ಕುಂಬಳೆ ಸೀಮೆಯ ಅತ್ಯಂತ ಪುರಾತನ ಹಾಗೂ ಐತಿಹಾಸಿಕ ಹಿನ್ನೆಲೆಯುಳ್ಳ ಚೌಗ್ರಾಮದ ಕಾಟುಕುಕ್ಕೆ ಶ್ರೀ ಸುಬ್ರಾಯ ದೇವಸ್ಥಾನದಲ್ಲಿ ಮೇ 6 ರಿಂದ 11 ರವರೆಗೆ ನಡೆಯಲಿರುವ ಅಷ್ಟಬಂಧ ಬ್ರಹ್ಮಕಲಶೋತ್ಸವದ ಸ್ವಾಗತ ಸಮಿತಿಯನ್ನು ಗುರುವಾರ ರಚಿಸಲಾಯಿತು.
ಅಷ್ಟಬಂಧ ಬ್ರಹ್ಮಕಲಶೋತ್ಸವದ ಕ್ಷೇತ್ರ ರಕ್ಷಾಧಿಕಾರಿಯಾಗಿ ಬ್ರಹ್ಮಶ್ರೀ ಉಚ್ಚಿಲತ್ತಾಯ ಪದ್ಮನಾಭ ತಂತ್ರಿ, ಗೌರವಾಧ್ಯಕ್ಷರಾಗಿ ಎಡನೀರು ಮಠ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ, ಅಧ್ಯಕ್ಷರಾಗಿ ಸುಧೀರ್ ಕುಮಾರ್ ಶೆಟ್ಟಿ ಯೆಣ್ಮಕಜೆ, ಗೌರವ ಸಲಹಾ ಸಮಿತಿ ಹಾಗೂ ಸ್ವಾಗತ ಸಮಿತಿ ಅಧ್ಯಕ್ಷರಾಗಿ ಮಿತ್ತೂರು ಪುರುಷೋತ್ತಮ ಭಟ್ ಅವರನ್ನು ಆಯ್ಕೆ ಮಾಡಲಾಗಿದೆ.
ಕಾರ್ಯದರ್ಶಿಯಾಗಿ ಕಾರ್ತಿಕ್ ಶಾಸ್ತ್ರಿ ಖಂಡೇರಿ, ಉಪ ಕಾರ್ಯದರ್ಶಿಗಳಾಗಿ ಪದ್ಮನಾಭ ಶೆಟ್ಟಿ ಚಕ್ಕಿತ್ತಡ್ಕ, ಸಾತ್ವಿಕ್ ಖಂಡೇರಿ, ಖಜಾಂಚಿ ತಾರಾನಾಥ ರೈ ಪಡ್ಡಂಬೈಲುಗುತ್ತು, ಸ್ವಾಗತ ಸಮಿತಿ ಸಂಚಾಲಕರಾಗಿ ಸದಾನಂದ ಶೆಟ್ಟಿ ಕುದ್ವ, ವೆಂಕಟರಾಜ ಮಿತ್ರ, ಜಯ ರೈ ಪಡ್ಡಂಬೈಲುಗುತ್ತು, ಚಂದ್ರಮೋಹನ, ಬಿ.ಎಸ್.ಗಾಂಭೀರ್, ಮಾತೃ ಸಮಿತಿ ಅಧ್ಯಕ್ಷರಾಗಿ ರಾಜಶ್ರೀ ಟಿ.ರೈ, ವೈದಿಕ ಸಮಿತಿ ಅಧ್ಯಕ್ಷರಾಗಿ ವಿಷ್ಣು ಪ್ರಕಾಶ್ ಪಿಲಿಂಗಲ್ಲು, ಸಾಂಸ್ಕøತಿಕ ಸಮಿತಿ ಅಧ್ಯಕ್ಷರಾಗಿ ಲೋಕನಾಥ ಶೆಟ್ಟಿ ಮಾಯಿಲೆಂಗಿ ಆಯ್ಕೆಯಾಗಿದ್ದಾರೆ. ಮಿತ್ತೂರು ಪುರುಷೋತ್ತಮ ಭಟ್ ಅಧ್ಯಕ್ಷತೆಯೆಲ್ಲಿ ನಡೆದ ಸಮಿತಿ ರಚನೆ ಸಭೆಯಲ್ಲಿ ವಿವಿಧ ಸಮಿತಿ ಹಾಗೂ ಉಪಸಮಿತಿಗಳನ್ನು ರಚಿಸಲಾಗಿದೆ.




.jpg)
