ಬದಿಯಡ್ಕ: ಸರ್ಕಾರಿ ಸೇವೆಗೆ ಸೇರ್ಪಡೆಗೊಂಡು ಆರು ವರ್ಷಗಳಾದರೂ ನಿಯಮಾನುಸಾರ ವೇತನ ಲಭಿಸದೆ ಮನನೊಂದು ಕೋಝಿಕ್ಕೋಡ್ ಜಿಲ್ಲೆಯಲ್ಲಿ ಆತ್ಮಹತ್ಯೆಗೆ ಶರಣಾದ ಅಲೀನಾ ಟೀಚರ್ ಸಾವಿಗೆ ಕಾರಣರಾದವರನ್ನು ಶಿಕ್ಷಿಸಬೇಕೆಂದು ಆಗ್ರಹಿಸಿ ಕೆ.ಪಿ.ಎಸ್.ಟಿ.ಎ ಕುಂಬಳೆ ಉಪಜಿಲ್ಲಾ ಸಮಿತಿ ಶುಕ್ರವಾರ ಸಹಾಯಕ ಕುಂಬಳೆ ಉಪಜಿಲ್ಲಾ ವಿದ್ಯಾಧಿಕಾರಿ(ಎ.ಇ.ಒ.) ಕಚೇರಿ ಮುಂದೆ ಪ್ರತಿಭಟನಾ ಸಂಗಮವನ್ನು ಆಯೋಜಿಸಿತ್ತು.
ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಪ್ರಶಾಂತ್ ಕಾನತ್ತೂರು ಉದ್ಘಾಟಿಸಿದರು. ಉಪಜಿಲ್ಲಾ ಅಧ್ಯಕ್ಷ ಲತೀಶನ್ ಅಧ್ಯಕ್ಷತೆ ವಹಿಸಿದ್ದ ಸಭೆಯಲ್ಲಿ ಜಿಲ್ಲಾ ಕಾರ್ಯದರ್ಶಿ ಕೆ.ಗೋಪಾಲಕೃಷ್ಣನ್, ರಾಜ್ಯ ಕೌನ್ಸಿಲರ್ ಜಲಜಾಕ್ಷಿ ಪಿ, ಯೂಸುಫ್ ಕೊಟ್ಯಾಡಿ, ಮಲ್ಲಿಕಾ ಪಿ.ವಿ, ಸಂತೋಷ್ ಕ್ರಾಸ್ತಾ, ವಿನೋದ್ ನಂದಕುಮಾರ್, ರಮ್ಯಾ ಟಿ.ವಿ, ನಿರಂಜನ್ ರೈ, ಉಮೇಶ್ ಶೆಟ್ಟಿ, ರಾಮಕೃಷ್ಣನ್, ಅಂಬಿಕಾ, ಓಮನ ಪಿಲಾಂಕಟ್ಟೆ ಮುಂತಾದವರು ಮಾತನಾಡಿದರು.




.jpg)

