ಬದಿಯಡ್ಕ: ದೈಗೋಳಿ ಸಾಯಿನಿಕೇತನ ಸೇವಾಶ್ರಮ ಸಾಮಾಜಿಕ ಪುನರ್ವಸತಿ ಸಂಸ್ಥೆಯ ರೂವಾರಿಗಳಾದ ಡಾ. ಉದಯಕುಮಾರ್ ನೂಜಿ ಹಾಗೂ ಡಾ. ಶಾರದಾ ನೂಜಿ ದಂಪತಿಗಳನ್ನು ಕಿಳಿಂಗಾರು ಸಾಯಿಮಂದಿರದಲ್ಲಿ ಇತ್ತೀಚೆಗೆ ಸನ್ಮಾನಿಸಲಾಯಿತು.
ಕಿಳಿಂಗಾರು ಸಾಯಿನಿಲಯಕ್ಕೆ ಶ್ರೀರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಚಿತ್ತೈಸಿದ್ದ ಸಂದರ್ಭದಲ್ಲಿ ನಡೆದ ಸಮಾರಂಭದಲ್ಲಿ ಶ್ರೀಗಳು ಶಾಲು ಹೊದೆಸಿ ಮಂತ್ರಾಕ್ಷತೆಯನ್ನಿತ್ತು ಆಶೀರ್ವದಿಸಿದರು. ಕೊಡುಗೈದಾನಿ ಕಿಳಿಂಗಾರು ಸಾಯಿರಾಂ ಕೃಷ್ಣ ಭಟ್ ಹಾಗೂ ಪುತ್ರ ವೇಣು ಸ್ಮರಣಿಕೆಯನ್ನು ನೀಡಿದರು.





