ಬದಿಯಡ್ಕ: ಪ್ರಸಿದ್ಧ ವೈದ್ಯ ದಂಪತಿಗಳಾದ ಡಾ. ಪುರುಷೋತ್ತಮ ಭಟ್ ಮತ್ತು ಡಾ. ಪದ್ಮಾವತಿ ಕೊಲ್ಲಂಪಾರೆ ದಂಪತಿಗಳನ್ನು ಕಿಳಿಂಗಾರು ಸಾಯಿಮಂದಿರದಲ್ಲಿ ಸನ್ಮಾನಿಸಲಾಯಿತು.
ಕಿಳಿಂಗಾರು ಸಾಯಿನಿಲಯಕ್ಕೆ ಶ್ರೀರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಚಿತ್ತೈಸಿದ್ದ ಸಂದರ್ಭದಲ್ಲಿ ನಡೆದ ಸಮಾರಂಭದಲ್ಲಿ ಶ್ರೀಗಳು ಶಾಲು ಹೊದೆಸಿ ಮಂತ್ರಾಕ್ಷತೆಯನ್ನಿತ್ತು ಆಶೀರ್ವದಿಸಿದರು. ಕೊಡುಗೈದಾನಿ ಕಿಳಿಂಗಾರು ಸಾಯಿರಾಂ ಕೃಷ್ಣ ಭಟ್ ಅವರು ಸ್ಮರಣಿಕೆಯನ್ನು ನೀಡಿದರು. ಶ್ರೀರಾಮಚಂದ್ರಾಪುರ ಮಠದ ಹರಿಪ್ರಸಾದ ಪೆರಿಯಪ್ಪು, ವೇಣು ಕಿಳಿಂಗಾರು ಜೊತೆಗಿದ್ದರು.





