ಕಾಸರಗೋಡು: ಆಲ್ ಕೇರಳ ಪೋಟೋಗ್ರಾಫರ್ಸ್ ಅಸೋಸಿಯೇಷನ್ ಕಾಸರಗೋಡು ವೆಸ್ಟ್ ಯೂನಿಟ್ ವತಿಯಿಂದ ಜನವರಿ 26 ಪ್ರಜಾಪ್ರಭುತ್ವ ದಿನಾಚರಣೆಯನ್ನು ಎಕೆಪಿಎ ಕಾಸರಗೋಡು ವಲಯ ಸದಸ್ಯರ ಮಕ್ಕಳಿಗೆ ನಡೆಸಿದ ಆನ್ ಲೈನ್ ಭಾಷಣ ಸ್ಪರ್ಧೆಯ ವಿಜೇತರಿಗೆ ಬಹುಮಾನ ಹಾಗೂ ಪ್ರಮಾಣ ಪತ್ರ ವಿತರಿಸಲಾಯಿತು.
ನಂದಲಕ್ಷ್ಮಿ ರಾಜೇಂದ್ರನ್ ಪ್ರಥಮ, ಅನ್ವಿತ್ ದೀಪ್ತ್ ಕುಮಾರ್ ದ್ವಿತೀಯ, ಆಶೃತ್ ಗಣೇಶ್ ರೈ ತೃತೀಯ ಸ್ಥಾನಗಳಿಸಿದರು. ಯೂನಿಟ್ ಅಧ್ಯಕ್ಷ ವಸಂತ್ ಕೆರೆಮನೆ ಅಧ್ಯಕ್ಷತೆವಹಿಸಿದ ಸಭೆಯಲ್ಲಿ. ಎಕೆಪಿಎ ಕಾಸರಗೋಡು ವಲಯ ಅಧ್ಯಕ್ಷರಾದ ಸನ್ನಿ ಜೇಕಬ್ ಬಹುಮಾನ ವಿತರಿಸಿದರು. ಈ ಸಂದರ್ಭದಲ್ಲಿ ಕೆಪಿಎ ಜಿಲ್ಲಾ ಕ್ರಿಕೆಟ್ ಕೋರ್ಡಿನೇಟರ್ ರತೀಶ್ ರಾಮು, ವಲಯ ಕೋಶಾಧಿಕಾರಿ ಮನು ಎಲ್ಲೋರ, ಯೂನಿಟ್ ಪಿಆರ್‍ಓ ವಾಸು ಎ, ಯೂನಿಟ್ ಸಾಂತ್ವನ ಕೋರ್ಡಿನೇಟರ್ ಶಾಲಿನಿ ರಾಜೇಂದ್ರನ್, ಸಮಿತಿ ಸದಸ್ಯರಾದ ಚಂದ್ರಶೇಖರ, ಮೈಂದಪ್ಪ ಕೆ.ಎಂ, ಅಭಿಶೇಕ್ ಸಿ, ರತೀಶ್ ಬಿ.ಕೆ, ಯೂನಿಟ್ ಸದಸ್ಯ ದೀಪ್ತ್ ಕುಮಾರ್ ಉಪಸ್ಥಿತರಿದ್ದರು. ಯೂನಿಟ್ ಕಾರ್ಯದರ್ಶಿ ವಿಶಾಖ್ ಸ್ವಾಗತಿಸಿ ಕೋಶಾಧಿಕಾರಿ ಗಣೇಶ್ ರೈ ವಂದಿಸಿದರು.






