ಮುಳ್ಳೇರಿಯ: ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನ ಜೀರ್ಣೋದ್ಧಾರ ಬ್ರಹ್ಮಕಲಶೋತ್ಸವದ ಅಂಗವಾಗಿ ಅಟ್ಟಪ್ಪರಂಬ ಶ್ರೀ ಅಯ್ಯಪ್ಪ ಭಜನಾ ಮಂದಿರದಲ್ಲಿ ಮುಳಿಯಾರು ವ್ಯಾಪ್ತಿಯ ಅಟ್ಟಪ್ಪರಂಬ ಪ್ರಾದೇಶಿಕ ಸಮಿತಿ ರೂಪೀಕರಣ ಸಭೆ ಜರಗಿತು.
ಬಾಲಕೃಷ್ಣನ್ ಅಧ್ಯಕ್ಷತೆ ವಹಿಸಿದ್ದ ಸಭೆಯಲ್ಲಿ ಗೋವಿಂದ ಬಳ್ಳಮೂಲೆ ಸಮಿತಿಯ ಕಾರ್ಯಯೋಜನೆಗಳ ಬಗ್ಗೆ ಸಮಗ್ರ ಮಾಹಿತಿಗಳನ್ನಿತ್ತರು.
ಸಭೆಯಲ್ಲಿ ಸಮಿತಿಯ ಕಾರ್ಯಕಾರೀ ಸಮಿತಿಯನ್ನು ರೂಪೀಕರಿಸಲಾಯಿತು. ರಕ್ಷಾಧಿಕಾರಿ ಕೃಷ್ಣ ಭಟ್ ಅಡ್ಕ , ರಾಜೇಶ್ ಭಟ್ , ಸುಕುಮಾರನ್ ಪಾಟಿಕ್ಕೊಚ್ಚಿ, ಪ್ರಕಾಶನ್ ಪಾತನಡುಕ್ಕ, ಬಾಲಕೃಷ್ಣನ್ ವಿಷ್ಣುಮಂಗಲಂ , ಸುರೇಶ ರಾಯ್ ಅಮಕ್ಕಾರ್ , ಉದಯನಾಯಕ್ ಚರೋಳಿಮೂಲೆ , ಅಧ್ಯಕ್ಷರು ರಾಘವನ್ , ಉಪಾಧ್ಯಕ್ಷ ಸುಕುಮಾರನ್ ಅಟ್ಟಪ್ಪರಂಬ, ಸಂಜೀವನ್,
ಕಾರ್ಯದರ್ಶಿ ಅನಿಲ್ ಕುಮಾರ್ ಮಜಕ್ಕಾರ್ , ಜೊತೆ ಕಾರ್ಯದರ್ಶಿ ಸುನಿಲ್ ಕುಮಾರ್ ಅಟ್ಟಪ್ಪರಂಬ , ಮಣಿಕಂಠನ್ , ನಳಿನಿ , ಕೋಶಾಧಿಕಾರಿ ಸುಶಾಂತ್ ಪಾಟಿಕ್ಕೊಚ್ಚಿ , ಮಾತೃ ಸಮಿತಿ ಅಧ್ಯಕ್ಷೆಯಾಗಿ ಅಂಬಿಕಾ ಪ್ರಸನ್ನನ್ ಪಾತನಡುಕ್ಕ ಮತ್ತು ಇತರ ಸದಸ್ಯರನ್ನು ಆಯ್ಕೆಮಾಡಲಾಯಿತು. ಪ್ರಧಾನ ಸಂಯೋಜಕಾರಾಗಿ ಉಲ್ಲಾಸ್ ವೆಳ್ಳಾಲ ಅವರನ್ನು ಆಯ್ಕೆಮಾಡಲಾಯಿತು.
ಸಭೆಯಲ್ಲಿ ನಿವೇದನಾ ಪತ್ರ ಮತ್ತು ರಶೀದಿ ಪುಸ್ತಕಗಳನ್ನು ಸಮಿತಿಯವರಿಗೆ ಹಸ್ತಾ0ತರಿಸಲಾಯಿತು. ಆಯ್ಕೆ ಮಾಡಲಾದ ಪದಾಧಿಕಾರಿಗಳು ಸ್ಥಾನವನ್ನು ಸ್ವೀಕರಿಸಿದ ಬಳಿಕ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.




.jpg)

