ಕಾಸರಗೋಡು: 'ಗೋಸಮೃದ್ಧಿ-ಎನ್.ಎಲ್.ಎಂ.2024-2025' ಯೋಜನೆಯನ್ವಯ ಜಾನುವಾರು ವಿಮಾ ಯೋಜನೆ ಶೀಘ್ರ ಜಾರಿಯಾಗಲಿದೆ. ಈ ಯೋಜನೆಯನ್ವಯ ಜಾನುವಾರುಗಳ ಮಾಲೀಕರೂ ವಿಮೆ ವ್ಯಾಪ್ತಿಗೆ ಒಳಪಡಲಿದ್ದಾರೆ. ವಿಮಾಯೋಜನೆ ಒಂದು ಮತ್ತು ಮೂರು ವರ್ಷಗಳ ಕಾಲಾವಧಿಯದ್ದಾಗಿದ್ದು, ಗರ್ಭಾವಸ್ಥೆಯ ಕೊನೆಯ ತ್ರೈಮಾಸಿಕದಲ್ಲಿ ಹಸು ಮತ್ತು ಎಮ್ಮೆಗಳಂತಹ ಪ್ರಾಣಿಗಳು, ಎರಡರಿಂದ 10 ವರ್ಷ ವಯಸ್ಸಿನ, ಏಳು ಲೀಟರ್ ಹಾಲು ಉತ್ಪಾದಿಸುವ ಮತ್ತು 65,000 ರೂ. ಬೆಕೆಬಾಳುವದ್ದಾಗಿದ್ದು, ಒಂದು ವರ್ಷಕ್ಕೆ ಶೇ. 4.48 ಮತ್ತು ಮೂರು ವರ್ಷಕ್ಕೆ ಶೇ. 10.98 ಪ್ರೀಮಿಯಂ ಇರಲಿದೆ.
ಇದರಲ್ಲಿ ಅರ್ಧದಷ್ಟು ಸರ್ಕಾರದ ಸಹಾಯಧನ ಹಾಗೂ ಹೈನುಗಾರರು ಪವತಿಸಬೇಕಾದ ಅರ್ಧ ಮೊತ್ತದಲ್ಲಿ ನೂರ ರೂ. ಕೇರಳಫೀಡ್ಸ್ ವಹಿಸಲಿದೆ. ಒಂದು ಲಕ್ಷ ಮೊತ್ತಕ್ಕೆ ಕೃಷಿಕನಿಗೆ ವರ್ಷಕ್ಕೆ 20ರೂ. ಮಾತ್ರ ಪ್ರೀಮಿಯಂ ಸಲ್ಲಿಸಿದರೆ ಸಾಕು. ಗರಿಷ್ಠ 5 ಲಕ್ಷ ರೂ. ವಿಮೆಯಾಘಿದ್ದು, 18 ರಿಂದ 70 ವರ್ಷ ವಯಸ್ಸಿನ ರೈತರು ಗರಿಷ್ಠ ಐದು ವರ್ಷಗಳ ಅವಧಿಗೆ ವಿಮೆ ಪಡೆಯಬಹುದು. ಜಿಲ್ಲಾ ಮಟ್ಟದಲ್ಲಿ ಪಶು ಆಸ್ಪತ್ರೆಗಳಿಗೆ ಮಂಜೂರುಗೊಳಿಸಿರುವ ಟಾರ್ಗೆಟ್ ಪ್ರಕಾರ ಜನುವಾರುಗಳಿಗೆ ವಿಮೆ ಕಲ್ಪಿಸಬಹುದಾಗಿದೆ. ಆಸಕ್ತ ರೈತರು ತಮ್ಮ ಸನಿಹದ ಪಶುವೈದ್ಯಕೀಯ ಆಸ್ಪತ್ರೆಗಳನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.




.jpeg)

