ಕಾಸರಗೋಡು: ಕಾಞಂಗಾಡು ನಗರಸಭೆ ವ್ಯಾಪ್ತಿಯ ಕಲ್ಲಟ್ರ ಶಾಪಿಂಗ್ ಕಾಂಪ್ಲೆಕ್ಸ್‍ನಲ್ಲಿ ಚಟುವಟಿಕೆ ನಡೆಸುತ್ತಿರುವ ಬಟ್ಟೆ ಅಂಗಡಿಯಲ್ಲಿ ಉಂಟಾಗಿರುವ ಬೆಂಕಿ ಅನಾಹುತದಿಂದ ಭಾರೀ ನಷ್ಟ ಸಂಭವಿಸಿದೆ. ಭಾನುವಾರ ನಸುಕಿಗೆ ಬೆಂಕಿ ಕಾಣಿಸಿಕೊಂಡಿದ್ದು, ಅಂಗಡಿ ಬಹುತೇಕ ಭಾಗ ಉರಿದು ನಾಶಗೊಂಡಿದೆ.
ಅಂಗಡಿಯೊಳಗಿಂದ ಹೊಗೆ ಹೊರಬರುತ್ತಿರುವುದನ್ನು ಗಮನಿಸಿ ಸ್ಥಳೀಯ ನಿವಾಸಿಗಳು ಧಾವಿಸಿದಾಗ ಒಳಭಾಗದಲ್ಲಿ ಹೊತ್ತಿ ಉರಿದು ಹೊರಗೆ ಬೆಂಕಿ ವ್ಯಾಪಿಸುತ್ತಿದ್ದಂತೆ ಪೊಲೀಸರು, ಸಥಳೀಯ ನಿವಾಸಿಗಳು ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ಶಮನಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ವಿದ್ಯುತ್ ಶಾರ್ಟ್ ಸಕ್ರ್ಯೂಟ್ ಬೆಂಕಿ ಅನಾಹುತಕ್ಕೆ ಕಾರಣವೆಂದು ಸಂಶಯಿಸಲಾಗಿದೆ.

