ಮಂಜೇಶ್ವರ : ಸಮುದ್ರಕ್ಕೆ ಹಾರಿ ಆತ್ಮಹತ್ಯೆಗೈಯಲು ಯತ್ನಿಸಿದ ದಂಪತಿಗಳ ಪೈಕಿ ಪತ್ನಿಯನ್ನು ಸ್ಥಳೀಯರು ಬದುಕುಳಿಸಿದ್ದು ಪತಿ ಸಮುದ್ರ ಪಾಲಾಗಿದ್ದಾರೆ.
ಮಂಜೇಶ್ವರ ಕುಂಡು ಕೊಳಕೆ ಸಮುದ್ರ ತೀರದಲ್ಲಿ ಘಟನೆ ನಡೆದಿದೆ. ಮೀಂಜ ಗ್ರಾಮ ಪಂಚಾಯತಿ ವ್ಯಾಪ್ತಿಯ ಕಡಂಬಾರು ನೀರೋಲ್ಪೆ ನಿವಾಸಿ ಹೊಸಂಗಡಿ ಎ.ಎಸ್ ಟೈಲರ್ ಮಾಲಕ ಭಾಸ್ಕರ ನೀರೋಲ್ಪೆ (60) ನೀರು ಪಾಲಾದ ವ್ಯಕ್ತಿಯಾಗಿದ್ದಾರೆ. ಇವರ ಪತ್ನಿ ಮಾಲತಿ (55) ಬದುಕುಳಿದವರಾಗಿದ್ದಾರೆ.
ದಂಪತಿಗಳು ಸಮುದ್ರ ಪಾಲಾಗುವ ಮಧ್ಯೆ ಮಾಲತಿಯನ್ನು ಸ್ಥಳೀಯರು ರಕ್ಷಿಸಿದ್ದಾರೆ. ಮಾಲತಿಯವರನ್ನು ಮಂಗಲ್ಪಾಡಿ ಸರಕಾರಿ ಆಸ್ಪತ್ರೆಗೆ ದಾಖಲಿಸಿ,ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ದೇರಳಕಟ್ಟೆ ಆಸ್ಪತ್ರೆಗೆ ದಾಖಲಿಸಿ, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಈ ನಡುವೆ ಸಮುದ್ರದಲ್ಲಿ ನಾಪತ್ತೆಯಾದ ಭಾಸ್ಕರವರ ಶವ ಬಾನುವಾರ ಮುಸೋಡಿ ಸಮುದ್ರ ಬದಿಯಲ್ಲಿ ಪತ್ತೆಯಾಗಿದೆ. ದಂಪತಿಗಳಿಬ್ಬರು ಸಮುದ್ರಕ್ಕೆ ಹಾರಲು ಕಾರಣವೇನೆಂದು ತಿಳಿದುಬಂದಿಲ್ಲ. ಘಟನೆ ಮಂಜೇಶ್ವರ ಪೆÇಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ಪೋಲಿಸರು ತನಿಖೆ ನಡೆಸುತ್ತಿದ್ದಾರೆ.



