ಕಾಸರಗೋಡು: ಜಿಲ್ಲೆಯ ಹಸಿರು ಕೇರಳ ಮಿಷನ್ ನ ಜಿಲ್ಲಾ ಮಟ್ಟದ ತಾಂತ್ರಿಕ ಸಮಿತಿ ಹಾಗೂ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯ ನೀರೊರತೆ ತಾಂತ್ರಿಕ ಸಮಿತಿಗಳ ಸಂಯುಕ್ತ ಸಭೆ ಕಾಸರಗೋಡಲ್ಲಿ ಶುಕ್ರವಾರ ನಡೆಯಿತು.
ಜಿಲ್ಲಾ ಜಲ ಬಜೆಟ್ ನ್ನು ಪರಿಷ್ಕರಿಸಿ ಮತ್ತಷ್ಟು ಸುಧಾರಿಸಲು ಮತ್ತು ಮಣ್ಣು, ಜಲ ಸಂರಕ್ಷಣೆ ಮತ್ತು ಜಲಾನಯನ ಅಭಿವೃದ್ಧಿ ಚಟುವಟಿಕೆಗಳನ್ನು ಜಿಲ್ಲೆಯ ಸ್ಥಳೀಯಾಡಳಿತ ಸಂಸ್ಥೆಗಳು ಕೈಗೆತ್ತಿಕೊಳ್ಳಬೇಕೆಂದು ಹಸಿರು ಕೇರಳ ಮಿಷನ್ ನ ಜಿಲ್ಲಾ ಮಟ್ಟದ ತಾಂತ್ರಿಕ ಸಮಿತಿ ಮತ್ತು ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯ ನೀರೊರತೆ ತಾಂತ್ರಿಕ ಸಮಿತಿಯ ಜಂಟಿ ಸಭೆಯಲ್ಲಿ ತೀರ್ಮಾನಿಸಲಾಯಿತು. ಜಲ ಭದ್ರತಾ ಯೋಜನೆಯ ಪ್ರಕಾರ ಜಿಲ್ಲೆಯ ಸರ್ಕಾರಿ ಸಂಸ್ಥೆಗಳು ಮತ್ತು ಇಲಾಖೆಗಳು. ಕರಾವಳಿ ಬ್ಲಾಕ್ ಗಳಾದ ಕಾಸರಗೋಡು ಮತ್ತು ಮಂಜೇಶ್ವರದ ಪರಿಸ್ಥಿತಿಗಳ ಕುರಿತು ವಿವರವಾದ ಅಧ್ಯಯನವನ್ನು ನಡೆಸಿ ಯೋಜನೆಗಳನ್ನು ಸಿದ್ಧಪಡಿಸಲಾಗುವುದು. ಕೇಂದ್ರ ಭೂಗರ್ಭ ಜಲ ಮಂಡಳಿ ಮತ್ತು ಕೋಝಿಕ್ಕೋಡ್ ಸಿಡಬ್ಲ್ಯೂಆರ್‍ಡಿಎಂ ನೇತೃತ್ವದಲ್ಲಿ ಅಧ್ಯಯನ ನಡೆಸಲು ಜಿಲ್ಲಾ ಪಂಚಾಯತಿ ಮೂಲಕ ಯೋಜನೆ ಸಿದ್ಧಪಡಿಸಲಾಗುವುದು.
ನೀರಿನ ಗುಣಮಟ್ಟ ಪರೀಕ್ಷಾ ಪ್ರಯೋಗಾಲಯಗಳನ್ನು ಹೆಚ್ಚಿನ ಶಾಲೆಗಳಲ್ಲಿ ತೆರೆಯಲಾಗುವುದು. ಹಸಿರು ಕೇರಳ ಮಿಷನ್ ಮೂಲಕ ಬ್ಲಾಕ್‍ಗಳಲ್ಲಿರುವ ಎಲ್ಲಾ ಜಲಾಶಯಗಳ ಸಮೀಕ್ಷೆ ನಡೆಸುವ ಮೂಲಕ ವಿವರವಾದ ವರದಿಯನ್ನು ಸಿದ್ಧಪಡಿಸಲಾಗುತ್ತದೆ. ಜಿಲ್ಲಾ ಪಂಚಾಯತಿ ಕಚೇರಿಯ ಆವರಣದಲ್ಲಿರುವ ಮಳೆನೀರು ಕೊಯ್ಲು ವ್ಯವಸ್ಥೆಯನ್ನು ನವೀಕರಿಸಿ ಕಾರ್ಯಗತಗೊಳಿಸಲಾಗುವುದು. ಈ ಕಾರ್ಯದ ಅಧ್ಯಯನ ನಡೆಸಲು ವಿಶೇಷ ಸಮಿತಿಯನ್ನು ನೇಮಿಸಲಾಗುವುದು. ಶಾಲೆಗಳಲ್ಲಿ ಸ್ಥಾಪಿಸಿರುವ ಮಳೆನೀರಿನ ಟ್ಯಾಂಕ್‍ಗಳನ್ನು ಪುನರುಜ್ಜೀವನಗೊಳಿಸಿ ಅವುಗಳನ್ನು ಉಪಯೋಗಿಸುವಂತೆ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು. ಸಂಘ ಸಂಸ್ಥೆಗಳಲ್ಲಿ ಮತ್ತು ಶಾಲೆಗಳಲ್ಲಿ ಮಳೆನೀರು ಕೊಯ್ಲು ವ್ಯವಸ್ಥೆಯನ್ನು ಸ್ಥಾಪಿಸಲಾಗುವುದು. ಸಾರ್ವಜನಿಕ ಕೆರೆಗಳು ಮತ್ತು ಬಾವಿಗಳನ್ನು ಸ್ವಚ್ಛಗೊಳಿಸಿ ಬಳಕೆಗೆ ಯೋಗ್ಯವಾಗುವಂತೆ ಮಾಡಲಾಗುವುದು.
ಭೂಗರ್ಭ ಜಲ ಇಲಾಖೆಯ ಜಿಲ್ಲಾ ಅಧಿಕಾರಿ ಬಿ. ಅರುಣ್‍ದಾಸ್, ಸಣ್ಣ ನೀರಾವರಿ ಕಾರ್ಯನಿರ್ವಾಹಕ ಎಂಜಿನಿಯರ್ ಲಾಲಿ ಜಾರ್ಜ್, ನೀರಾವರಿ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಪಿ.ಟಿ. ಸಜಿವ್, ಜಿಲ್ಲಾ ಪಂಚಾಯತಿ ಕಾರ್ಯನಿರ್ವಾಹಕ ಎಂಜಿನಿಯರ್ ಎನ್. ಶೈನಿ, ಉಪ ಯೋಜನಾಧಿಕಾರಿ ಎಚ್. ದ್ವಾರ, ಜಿಲ್ಲಾ ಪಂಚಾಯತಿ ಕಾರ್ಯದರ್ಶಿ ಎಸ್. ಶ್ಯಾಮಲಕ್ಷ್ಮಿ, ನವಕೇರಳ ಕ್ರಿಯಾ ಯೋಜನೆಯ ಜಿಲ್ಲಾ ಸಂಯೋಜಕ ಕೆ. ಬಾಲಕೃಷ್ಣನ್, ಎಇಇ ನೀರಾವರಿಅಧಿಕಾರಿ ಇ.ಕೆ. ಅರ್ಜುನನ್, ಕಾಸರಗೋಡು ಪ್ರಧಾನ ಕೃಷಿ ಕಚೇರಿಯ ತಾಂತ್ರಿಕ ಸಹಾಯಕಿ ನಾಜಿಯಾ ಶೆರಿಫ್, ಕಾಸರಗೋಡು ಎಇಇ ಇನ್ಲ್ಯಾಂಡ್ ನ್ಯಾವಿಗೇಷನ್ ಎ.ಪಿ. ಸುಧಾಕರನ್ ಮತ್ತಿತರರು ಸಭೆಯಲ್ಲಿ ಉಪಸ್ಥಿರಿದ್ದರು.




