ಕಾಸರಗೋಡು: ಕುಟುಂಬಶ್ರೀಯ 'ಕೆ ಫಾರ್ ಕೇರ್' ಆರ್ಥಿಕ ಯೋಜನೆಯನ್ವಯ ತರಬೇತಿಗಾಗಿ ಅರ್ಜಿ ಆಹ್ವಾಣಿಸಲಾಗಿದೆ. ಗೃಹ ಆರೈಕೆ ವಲಯದಲ್ಲಿ ಕುಟುಂಬಶ್ರೀ ಘಟಕ ರಚಿಸಿ ಜಾರಿಗೊಳಿಸುವ ಯೋಜನೆ ಇದಾಗಿದ್ದು, ವಯೋವೃದ್ಧರು - ಮಕ್ಕಳ, ರೋಗಿಗಳ, ಅಂಗವೈಕಲ್ಯರ ಮತ್ತು ಮಾತೃತ್ವದ ಆರೈಕೆ ಹೀಗೆ ದೈನಂದಿನ ಜೀವನದಲ್ಲಿ ಒಂದು ಕುಟುಂಬಕ್ಕೆ ಇನ್ನೊಬ್ಬ ವ್ಯಕ್ತಿಯ ಸಹಾಯದ ಅಗತ್ಯವಿರುವ ಕಡೆಗಳಲ್ಲಿ ಕೆ ಫಾರ್ ಕೇರ್ ಮೂಲಕ ತರಬೇತಿ ಪಡೆದ ಕಾರ್ಯನಿರ್ವಾಹಕರ ಸೇವೆಯನ್ನು ಒದಗಿಸಲಾಗುತ್ತದೆ. ಶರೀರ ಭಾಗಗಳ ಕಾರ್ಯನಿರ್ವಹಣೆ, ಆರೋಗ್ಯಕರ ಜೀವನ ಮತ್ತು ವೈಯಕ್ತಿಕ ನೈರ್ಮಲ್ಯ ರೋಗಿಯ ಹಕ್ಕಾಗಿದೆ, ಸೋಂಕು ನಿವಾರಣೆ, ಅವುಗಳ ತಡೆಗಟ್ಟುವಿಕೆ, ಕಣ್ಣಿನ ಆರೈಕೆ, ಗಾಯದ ಡ್ರೆಸ್ಸಿಂಗ್, ಕ್ಯಾತಿಟ್ರಲ್ ಆರೈಕೆ, ವ್ಯಾಯಾಮ ದಿನಚರಿಗಳು, ಇನ್ಸುಲಿನ್ ಇಂಜೆಕ್ಷನ್ ನೀಡುವುದು, ರೋಗಿಗಳನ್ನು ಸ್ಥಳಾಂತರಗೊಳಿಸುವುದು ಸೇರಿದಂತೆ 31 ವಿಷಯಗಳಲ್ಲಿ ತಜ್ಞರಿಂದ ತರಬೇತಿಯನ್ನು ನೀಡಲಾಗುತ್ತದೆ.
ಕಾಸರಗೋಡು ಜಿಲ್ಲೆಯಲ್ಲಿ ಯೋಜನೆಯ ಅಂಗವಾಗಿ ತರಬೇತಿ ಪಡೆಯಲು ಆಸಕ್ತಿ ಇರುವವರು ಎಸ್‍ಎಸ್‍ಎಲ್‍ಸಿ ಶೈಕ್ಷಣಿಕ ಅರ್ಹತೆ, ಕುಟುಂಬಶ್ರೀಯ ಸದಸ್ಯತನ, ಕುಟುಂಬಶ್ರೀಯಲ್ಲಿ ಸದಸ್ಯರಾಗಿರುವ ಕುಟುಂಬದ ಸದಸ್ಯ ಅಥವಾ ಸಹಾಯಕ ಗುಂಪಿನ ಕುಟುಂಬ ಸದಸ್ಯರಿಗೆ ಈ ಯೋಜನೆಯಲ್ಲಿ ಸೇರ್ಪಡೆಗೊಳ್ಳಬಹುದಾಗಿದೆ.
ತರಬೇತಿ ಪಡೆಯುವವರನ್ನು ಸ್ಕ್ರೀನಿಂಗ್ ಮೂಲಕಆಯ್ಕೆ ಮಾಡಲಾಗುತ್ತದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ - ಫೆಬ್ರವರಿ 4 ಆಗಿದ್ದು, ಹೆಚ್ಚಿನ ವಿವರಗಳಿಗೆ
ದೂರವಾಣಿ ಸಂಖ್ಯೆ(8943201001, 8592001222)ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.




