ಮಲಪ್ಪುರಂ: ಸರ್ಕಾರಿ ಆಸ್ಪತ್ರೆಯಲ್ಲಿ ಮಹಿಳಾ ವೈದ್ಯರ ಬದಲು ರಾತ್ರಿ ಕರ್ತವ್ಯಕ್ಕೆ ಪತಿ ಆಗಮಿಸುತ್ತಿರುವುದು ಅಚ್ಚರಿಯೊಂದಿಗೆ ತೀವ್ರ ವಿವಾದಕ್ಕೆಡೆಯಾಗಿದೆ. ತಿರುರಂಗಡಿ ತಾಲೂಕು ಆಸ್ಪತ್ರೆಯ ಡಾ. ಸಫೀದಾ ಅವರ ವಿರುದ್ಧ ಈ ಆರೋಪ ಕೇಳಿಬಂದಿದೆ.
ರಾತ್ರಿ ಕರ್ತವ್ಯದಲ್ಲಿರುವ ಡಾ.ಸಫೀದಾ ಅವರು ಆಗಮಿಸುತ್ತಿಲ್ಲ, ಬದಲಿಗೆ ಅವರ ಪತಿ ಡಾ. ಸಫೀಲ್ ರೋಗಿಗಳನ್ನು ಪರೀಕ್ಷಿಸುತ್ತಾರೆ ಎಂಬ ವಿವಾದ ಇದೀಗ ಹುಟ್ಟಿಕೊಂಡಿದೆ. ಈ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ.






