HEALTH TIPS

ದೇವಸ್ಥಾನದ ಉತ್ಸವ ಮೆರವಣಿಗೆ ವೇಳೆ 'ಇಂಕ್ವಿಲಾಬ್ ಜಿಂದಾಬಾದ್' ಘೋಷಣೆ; ಕಣ್ಣೂರಿನಲ್ಲಿ ಪೋಲೀಸ್ ಕಸ್ಟಡಿಯಲ್ಲಿದ್ದ ಶಂಕಿತನನ್ನು ಬಿಡಿಸಿ ಕರೆದೊಯ್ದ ಸಿಪಿಎಂ ಕಾರ್ಯಕರ್ತರು

ಕಣ್ಣೂರು: ತಲಶ್ಶೇರಿಯ ಮನೋಲಿಕಾವು ಎಂಬಲ್ಲಿ ಪೋಲೀಸ್ ವಶಕ್ಕೆ ಪಡೆದಿದ್ದ ವ್ಯಕ್ತಿಯನ್ನು ಸಿಪಿಎಂ ಕಾರ್ಯಕರ್ತರು ಬಲವಂತವಾಗಿ ಬಿಡುಗಡೆ ಮಾಡಿದ ಘಟನೆ ಬೆಳಕಿಗೆ ಬಂದಿದೆ. 

ಆರೋಪಿ ಸಿಪಿಎಂ ಕಾರ್ಯಕರ್ತನನ್ನು ಪೋಲೀಸ್ ವಾಹನದಿಂದ ಹೊರಗೆ ಕರೆದೊಯ್ಯಲಾಯಿತು. ತಡೆದ ಪೋಲೀಸರನ್ನು ದೇವಾಲಯದ ಆವರಣದಲ್ಲಿ ದಿಗ್ಬಂಧನಕ್ಕೊಳಪಡಿಸಲಾಯಿತು.  ಘಟನೆಯಲ್ಲಿ 55 ಸಿಪಿಎಂ ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲಾಗಿದೆ.

ಮೊನ್ನೆ, ಮನೋಲಿಕಾವುನಲ್ಲಿ ಹಬ್ಬದ ಸಂದರ್ಭದಲ್ಲಿ, ಕೆಲವು ಸಿಪಿಎಂ ಕಾರ್ಯಕರ್ತರು ಮತ್ತು ಸ್ಥಳೀಯರ ನಡುವೆ ಘರ್ಷಣೆ ನಡೆದಿತ್ತು. ಉತ್ಸವ ಮೆರವಣಿಗೆ ಸಂದರ್ಭ, ಸಿಪಿಎಂ ಕಾರ್ಯಕರ್ತರು 'ಇಂಕ್ವಿಲಾಬ್ ಜಿಂದಾಬಾದ್' ಘೋಷಣೆಗಳನ್ನು ಮೊಳಗಿಸಿದ್ದರು. ಮತ್ತು ಅದನ್ನು ತಡೆಯಲು ಬಂದ ತಲಶ್ಶೇರಿ ಸಿಐ ಸೇರಿದಂತೆ ಪೋಲೀಸ್ ತಂಡದ ಮೇಲೆ ಹಲ್ಲೆ ನಡೆಸಿದರು. ಈ ಘಟನೆಯಲ್ಲಿ 27 ಸಿಪಿಎಂ ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲಾಗಿತ್ತು. ನಿನ್ನೆ ಅವರನ್ನು ಬಂಧಿಸಲು ಬಂದಾಗ ಮತ್ತೆ ಘರ್ಷಣೆಗಳು ಭುಗಿಲೆದ್ದವು.


ಪ್ರಮುಖ ಆರೋಪಿ ದೀಪ್ ನನ್ನು ವಶಕ್ಕೆ ತೆಗೆದುಕೊಂಡು ಪೋಲೀಸ್ ವಾಹನಕ್ಕೆ ತುಂಬಿಸುವಾಗ ಸಿಪಿಎಂ ಕಾರ್ಯಕರ್ತರು ದೌಡಾಯಿಸಿದರು. ಪೋಲೀಸ್ ಅಧಿಕಾರಿಗಳನ್ನು ದಿಗ್ಬಂಧನಕ್ಕೊಳಪಡಿಸಿದ ನಂತರ, ಅವರು ದೀಪ್ ನನ್ನು ಪೋಲೀಸ್ ವಾಹನದಿಂದ ಬಲವಂತವಾಗಿ ಬಿಡುಗಡೆ ಮಾಡಿದರು. ಅವರು ಇತರರ ಬಂಧನವನ್ನೂ ತಡೆದರು. ತಮ್ಮ ಪಕ್ಷ ಕೇರಳವನ್ನು ಆಳುತ್ತಿದೆ ಮತ್ತು ಪಕ್ಷದ ಸದಸ್ಯರನ್ನು ಮುಟ್ಟಿದರೆ, ತಲಶ್ಶೇರಿ ಠಾಣೆಯಲ್ಲಿ ಯಾರೂ ಇರುವುದಿಲ್ಲ ಎಂಬ ಬೆದರಿಕೆಗಳಿಂದ ಹಿಂಸಾಚಾರ ಸಂಭವಿಸಿದೆ ಎಂದು ಎಫ್‍ಐಆರ್‍ನಲ್ಲಿ ಹೇಳಲಾಗಿದೆ. ಘಟನೆಯಲ್ಲಿ 4 ಪೆÇಲೀಸರು ಗಾಯಗೊಂಡಿದ್ದಾರೆ. ಪ್ರಸ್ತುತ, 55 ಸಿಪಿಎಂ ಕಾರ್ಯಕರ್ತರ ವಿರುದ್ಧ ಪ್ರಕರಣಗಳನ್ನು ದಾಖಲಿಸಲಾಗಿದೆ. ಅವರಲ್ಲಿ ಒಬ್ಬನನ್ನು ಮಾತ್ರ ಬಂಧಿಸಲಾಯಿತು. ಕರ್ತವ್ಯ ನಿರ್ವಹಣೆಗೆ ಅಡ್ಡಿಪಡಿಸಿದ ಮತ್ತು ಪೋಲೀಸ್ ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಪ್ರಕರಣಗಳು ದಾಖಲಾಗಿವೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries