ಬದಿಯಡ್ಕ: ಕ್ಯಾಂಪ್ಕೋ ಸಂಸ್ಥೆಯ `ಸಾಂತ್ವನ' ಯೋಜನೆಯಡಿಯಲ್ಲಿ ಕ್ಯಾಂಪ್ಕೋ ಬದಿಯಡ್ಕ ಶಾಖೆಯ ಸಕ್ರಿಯ ಸದಸ್ಯ ಪುರುಷೋತ್ತಮ ಪ್ರಸಾದ್ ಜಿ, ಉಬ್ರಂಗಳ ಅವರ ಪತ್ನಿಯ ಆಂಜಿಯೋಪ್ಲಾಸ್ಟಿ ಚಿಕಿತ್ಸೆಗೆ ಕ್ಯಾಂಪ್ಕೋ ಸಹಾಯಧನದ ಮೊತ್ತ ರೂ.50,000 (ಐವತ್ತು ಸಾವಿರ) ಚೆಕ್‍ನ್ನು ಅವರ ಸ್ವಗೃಹದಲ್ಲಿ ಸಂಸ್ಥೆಯ ಗೌರವಾನ್ವಿತ ಉಪಾಧ್ಯಕ್ಷ ಶಂಕರನಾರಾಯಣ ಖಂಡಿಗೆ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ನಿರ್ದೇಶಕ ಪದ್ಮರಾಜ ಪಟ್ಟಾಜೆ, ಪ್ರಾದೇಶಿಕ ವ್ಯವಸ್ಥಾಪಕ ಚಂದ್ರ ಎಂ. ಹಾಗೂ ಬದಿಯಡ್ಕ ಶಾಖೆಯ ವ್ಯವಸ್ಥಾಪಕ ಶ್ಯಾಂಪ್ರಶಾಂತ ಬಿ ಉಪಸ್ಥಿತರಿದ್ದರು.




.jpg)

