ಬದಿಯಡ್ಕ: ಜಾರ್ಖಂಡ್ ರಾಂಚಿಯ ಖೇಲ್ ಗಾಂವ್‍ನಲ್ಲಿ ಜರುಗಿದ 68ನೇ ಅಖಿಲ ಭಾರತ ಕರ್ತವ್ಯ ಕೂಟದ ಕಂಪ್ಯೂಟರ್ ಅವಾರ್ನೆಸ್ ಸ್ಪರ್ಧೆಯಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿದ ಸಿವಿಲ್ ಹೆಡ್ ಕಾನ್‍ಸ್ಟೇಬಲ್ ಗುರುರಾಜ್ ಜಾಧವ್, ಬೆಳ್ಳಿಯ ಪದಕ ಗೆದ್ದಿರುತ್ತಾರೆ.ಒಟ್ಟು 24 ರಾಜ್ಯಗಳ 68 ಸ್ಪರ್ಧಾಳುಗಳು ಭಾಗವಹಿಸಿದ್ದರು.
ಇವರು ಈ ಮೊದಲು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಮತ್ತು ಮಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಸಿಸ್ಟಂ ಅಡ್ಮಿನಿಸ್ಟ್ರೇಟರ್ ಆಗಿ ಹಾಗೂ ಮೂಲ್ಕಿ ಪೊಲೀಸ್ ಠಾಣೆಯಲ್ಲಿ ಠಾಣಾ ಬರಹಗಾರರಾಗಿ ಕರ್ತವ್ಯ ನಿರ್ವಹಿಸಿದ್ದರು. ಪ್ರಸ್ತುತ ಸಿಐಡಿ ಕಚೇರಿಯಲ್ಲಿ ಅಡ್ಮಿನಿಸ್ಟ್ರೇಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಈಗಾಗಲೇ ರಾಜ್ಯಮಟ್ಟದಲ್ಲಿ 4 ಚಿನ್ನದ ಪದಕವನ್ನು ಮತ್ತು ಅಖಿಲ ಭಾರತ ಕರ್ತವ್ಯಕೂಟದಲ್ಲಿ ಮೂರು ಪದಕವನ್ನು ಪಡೆದಿದ್ದಾರೆ. ಇವರು ಮಾನ್ಯ ಮುಂಡೋಡು ನಿವಾಸಿ ಧರ್ಮಪಾಲ ಜಾಧವ್ ಇವರ ಪುತ್ರ, ಮಂಗಳೂರು ಯುನಿವರ್ಸಿಟಿ ಕಾಲೇಜು ಮತ್ತು ಪೆರಡಾಲ ನವಜೀವನ ಪ್ರೌಢಶಾಲೆಯ ಹಳೆವಿದ್ಯಾರ್ಥಿಯಾಗಿದ್ದಾರೆ.




.jpg)

