ಕಾಸರಗೋಡು : ಜಿಲ್ಲೆಯ ಸಿಪಿಐಎಂ ಪಕ್ಷದ ನೂತನ ಜಿಲ್ಲಾ ಕಾರ್ಯದರ್ಶಿಯಾಗಿ ಪಕ್ಷದ ಹಿರಿಯ ಕಾರ್ಕರ್ತ, ತ್ರಿಕರಿಪುರ ಶಾಸಕ ಎಂ.ರಾಜಗೋಪಾಲನ್ ಆಯ್ಕೊಗೊಂಡಿದ್ದಾರೆ. ಕಾಞಂಗಾಡಿನಲ್ಲಿ ನಡೆದಪಕ್ಷದ ಜಿಲ್ಲಾ ಸಮ್ಮೇಳನದಲ್ಲಿ ಪ್ರತಿನಿಧಿಗಳು ಚುನಾವಣೆ ಮೂಲಕ ನೂತನ ಸಾರಥಿಯನ್ನು ಆಯ್ಕೆ ಮಾಡಿದ್ದಾರೆ. ಒಟ್ಟು 36ಮಂದಿಯನ್ನು ಜಿಲ್ಲಾ ಸಮಿತಿಗೆ ಆಯ್ಕೆ ಮಾಡಲಾಘಿದ್ದು, ಇದರಲ್ಲಿ ಈ ಹಿಂದಿನ ಏಳು ಮಂದಿ ಪ್ರತಿನಿಧೀಗಳನ್ನು ಹೊರತುಪಡಿಸಿ, ಒಂಬತ್ತು ಹೊಸಬರನ್ನು ಸೇರ್ಪಡೆಗೊಳಿಸಲಾಗಿದೆ.
ಕಮ್ಯೂನಿಸ್ಟ್ ಆಂದೋಲನಗಳ ಚರಿತ್ರೆ ಸಾರುವ ಕಯ್ಯೂರು ನಿವಾಸಿಯಾದ ಎಂ.ರಾಜಗೋಪಾಲನ್ ಈ ಹಿಂದೆ ಸಿಐಟಿಯು ಜಿಲ್ಲಾ ಕಾರ್ಯದರ್ಶಿಯಾಗಿದ್ದರು.ಅಲ್ಲದೇ ಕಯ್ಯೂರ್ -ಚಿಮೇನಿ ಗ್ರಾ.ಪಂ. ಅಧ್ಯಕ್ಷರೂ ಆಗಿದ್ದರು. 2016ರಲ್ಲಿ ಮೊದಲ ಬಾರಿಗೆ ತ್ರಿಕರಿಪುರ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾದ ಅವರು ಪಕ್ಷದ ಬೆಳವಣಿಗೆಗೆ ಶ್ರಮಿಸಿದ್ದು, ಜಿಲ್ಲಾ ಸಾರಥ್ಯದ ಹೊಣೆ ಹೊತ್ತಿದ್ದಾರೆ.
ಕಳೆದ ಲೋಕಸಭಾ ಚುನಾವಣೆಯಲ್ಲಿ ಸಿಪಿಎಂನ ಭದ್ರಕೋಟೆ ಎಂದೇ ಹೆಸರಾಗಿರುವ ತ್ರಿಕರಿಪುರ ವಿಧಾನಸಭಾ ಕ್ಷೇತ್ರ ಸೇರಿದಂತೆ ಎಲ್ಲೆಡೆ ಪಕ್ಷಕ್ಕೆ ಮತ ಕುಸಿತ ಉಂಟಾಗಿತ್ತು. ಈದೇ ವೇಳೆ ಬಿಜೆಪಿ ಮತ್ತು ಯು.ಡಿ ಎಫ್‍ಗೆ ಮತ ಹೆಚ್ಚಾಗಿತ್ತು. ಪಕ್ಷಕ್ಕೆ ಉಂಟಾದ ಹಿನ್ನಡೆ ಸೇರಿದಂತೆ ವಿವಿಧ ಸವಾಲುಗಳ ಮಧ್ಯೆ ಪಕ್ಷವನ್ನು ಮುನ್ನಡೆಸುವ ಜವಾಬ್ದಾರಿ ಇವರ ಮೇಲಿದೆ.



