ಮಂಜೇಶ್ವರ :ಕಾಸರಗೋಡು ಜಿಲ್ಲಾ ಕುಲಾಲಸಂಘ(ರಿ.)ಮಂಜೇಶ್ವರ,ತೂಮಿನಾಡು ಇದರ ಆಶ್ರಯದಲ್ಲಿ ಕುಲಾಲ ಸಮಾಜದ ನೊಂದ ಜೀವಕ್ಕೊಂದು ಆಸರೆ ಯೋಜನೆಯ ನಾಲ್ಕನೇ ಕುಲಾಲ ಸಹಾಯ ಹಸ್ತ ರೂ. 35,000 (ಮೂವತ್ತೈದು ಸಾವಿರ ರೂ.) ಮೊತ್ತವನ್ನು ಕುಲಾಲ ಸಂಘ ಮಂಜೇಶ್ವರ ಶಾಖೆಯ ಕಣ್ವತೀರ್ಥ ರವೀಂದ್ರ ಕುಲಾಲ್ ಅವರ ಚಿಕಿತ್ಸೆಗಾಗಿ ಭಾನುವಾರ ಜಿಲ್ಲಾ ಸಂಘದ ಕಚೇರಿ, ತುಮಿನಾಡುನಲ್ಲಿ ಹಸ್ತಾಂತರಿಸಲಾಯಿತು.
ಈ ಸಂದರ್ಭ ಜಿಲ್ಲಾ ಕುಲಾಲ ಸಮುದಾಯದ ಭವನ ಕಟ್ಟಡ ಸಮಿತಿ ಕೋಶಾಧಿಕಾರಿ ಹಾಗೂ ಕುಲಾಲ ಸಂಘ ಮಂಜೇಶ್ವರ ಶಾಖೆಯ ಅಧ್ಯಕ್ಷ ಗೋಪಾಲ ಸಾಲಿಯಾನ್ ಕಣ್ವತೀರ್ಥ, ಕಾಸರಗೋಡು ಜಿಲ್ಲಾ ಸಂಘದ ಪ್ರಧಾನ ಕಾರ್ಯದರ್ಶಿ ದಾಮೋದರ ಮಾಸ್ತರ್ ಕಬ್ಬಿನಹಿತ್ಲು, ಜಿಲ್ಲಾ ಕುಲಾಲ ಸಮುದಾಯ ಭವನ ಕಟ್ಟಡಸಮಿತಿ ಪ್ರಧಾನ ಕಾರ್ಯದರ್ಶಿ ಜಗದೀಶ್ ರಾಮನಗರ, ಜಿಲ್ಲಾ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರಾದ ಸುಧೀರ್ ರಂಜನ್ ಕೆ. ದೈಗೋಳಿ, ಸುಧೀರ್ ಕೊಡಂಗೆ, ಪ್ರಸಾದ್ ತೂಮಿನಾಡು, ತಾರಾನಾಥ ಕಣ್ವತೀರ್ಥ, ಕುಲಾಲ ಸಂಘ ಮಂಜೇಶ್ವರ ಶಾಖೆಯ ಪ್ರಧಾನ ಕಾರ್ಯದರ್ಶಿ ಈಶ್ವರ್ ಕುಲಾಲ್ ಕಣ್ವತೀರ್ಥ, ಶಾಖೆಯ ಸದಸ್ಯ ನಾಗರಾಜ್ ಕಣ್ವತೀರ್ಥ ಉಪಸ್ಥಿತರಿದ್ದರು.

.jpg)

