ಮಂಜೇಶ್ವರ: ವರ್ಕಾಡಿ ಸೇಕ್ರೆಡ್ ಹಾರ್ಟ್ ಆಫ್ ಜೀಸಸ್ ಚರ್ಚ್‍ನ ವೇಲಂಕಣಿ ಮಾತೆಯ ವಾರ್ಷಿಕ ಮಹೋತ್ಸವ ಮಾರ್ಚ್ 2 ರಂದು ನಡೆಯಲಿದೆ. ಇದರ ಪೂರ್ವಭಾವಿಯಾಗಿ ಸೋಮವಾರ ಸಂಜೆ 5 ಗಂಟೆಗೆ ವರ್ಕಾಡಿ ಬೇಕರಿ ಜಂಕ್ಷನ್‍ನಿಂದ ಹೊರೆ ಕಾಣಿಕೆ ಮೆರವಣಿಗೆ ಆಗಮಿಸಿತು.ಬಳಿಕ ಧ್ವಜಾರೋಹಣ ನೆರವೇರಿತು.
ಫೆ.27, 28 ಮತ್ತು ಮಾರ್ಚ್ 1 ರಂದು ಸಂಜೆ 4 ಗಂಟೆಗೆ ನೋವೆನಾ ಪ್ರಾರ್ಥನೆ ಜರಗಲಿದೆ. ಮಾರ್ಚ್ 2 ರಂದು ಬೆಳಿಗ್ಗೆ ಪವಿತ್ರ ಮೊಂಬತ್ತಿ ವಿತರಣೆ ನಡೆಯಲಿದ್ದು, 10.30 ಕ್ಕೆ ನಡೆಯುವ ದಿವ್ಯ ಬಲಿ ಪೂಜೆಯನ್ನು ಮಂಗಳೂರು ಧರ್ಮಪ್ರಾಂತ್ಯದ ವಿಶ್ರಾಂತ ಧರ್ಮಾಧ್ಯಕ್ಷ ಅತೀ ವಂದನೀಯ ಅಲೋಶಿಯಸ್ ಪಾವ್ಲ್ ಡಿ'ಸೋಜ ನೆರವೇರಿಸುವರು. 12.30 ರಿಂದ ಅನ್ನ ಸಂತರ್ಪಣೆ ನಡೆಯಲಿದೆ. ಸಂಜೆ 5.30 ರಿಂದ ಸಾಂಸ್ಕøತಿಕ ಹಾಗೂ ಮನರಂಜನೆ ಕಾರ್ಯಕ್ರಮ ಜರಗಲಿದೆ ಎಂದು ಧರ್ಮಗುರು ಫಾದರ್ ಬಾಸಿಲ್ ವಾಸ್ ತಿಳಿಸಿದ್ದಾರೆ.

.jpg)
.jpg)

