ಮಂಜೇಶ್ವರ: ಕಣ್ವತೀರ್ಥ ಸಮೀಪ ಕಾರ್ಯನಿರ್ವಹಿಸುತ್ತಿರುವ ಮೀನು ಸಂಸ್ಕರಣೆ ಕಾರ್ಖಾನೆಯಿಂದ ಅಸಹನೀಯ ದುರ್ಗಂಧ ಬೀರುತ್ತಿದ್ದು, ಸ್ಥಳೀಯರ ಸಹನೆ ಪರೀಕ್ಷಿಸುವಂತಾಗಿದೆ. ನಾಗರಿಕರ ದುರಿತ ಹಿನ್ನೆಲೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷೆ ಎಂ.ಎಲ್.ಅಶ್ವಿನಿ ಇತ್ತೀಚೆಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಇವರ ಜೊತೆ ಬಿಜೆಪಿ ಮಂಡಲ ಅಧ್ಯಕ್ಷ ಆದರ್ಶ್ ಬಿ.ಎಂ, ಮುಖಂಡರಾದ ಯಾದವ್ ಬಡಾಜೆ, ಲಕ್ಷ್ಮಣ ಕುಚ್ಚಿಕ್ಕಾಡ್, ಯತಿರಾಜ ಶೆಟ್ಟಿ, ವಿನಯ ಭಾಸ್ಕರ್, ಸ್ಥಳೀಯರು ಉಪಸ್ಥಿತರಿದ್ದರು. ಕಾರ್ಖಾನೆ ದುರ್ವಾಸನೆ ಬಗ್ಗೆ ಜಿಲ್ಲಾಧಿಕಾರಿಗೆ ದೂರು ನೀಡಲು ತೀರ್ಮಾನಿಸಿದ್ದು, ಸೂಕ್ತ ಕ್ರಮ ಉಂಟಾಗದಿದ್ದಲ್ಲಿ ಬಿಜೆಪಿ ನೇತೃತ್ವದಲ್ಲಿ ಕಾರ್ಖಾನೆ ಮುಂಭಾಗ ಪ್ರತಿಭಟನೆ ನಡೆಸಲು ತೀರ್ಮಾನಿಸಲಾಯಿತು.




.jpg)

