ಬದಿಯಡ್ಕ: ಹೆಚ್ಚಿಸಲಾದ ಉದ್ಯೋಗ ತೆರಿಗೆಯನ್ನು ರದ್ದುಗೊಳಿಸಬೇಕು, ಹಸಿರು ಕ್ರಿಯಾಸೇನೆಯ ಸೇವೆಯ ಅಗತ್ಯವಿಲ್ಲದ ವ್ಯಾಪಾರಿಗಳೂ ಬಳಕೆದಾರ ಶುಲ್ಕ ನೀಡುವುದರಿಂದ ಮುಕ್ತಗೊಳಿಸಬೇಕು ಮೊದಲಾದ ಬೇಡಿಕೆಗಳೊಂದಿಗೆ ಕೇರಳ ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿಯ ಬದಿಯಡ್ಕ ಘಟಕದ ವತಿಯಿಂದ ಶುಕ್ರವಾರ ಬೆಳಗ್ಗೆ ಗ್ರಾಮಪಂಚಾಯಿತಿ ಮುಂಭಾಗ ಪ್ರತಿಭಟನೆ ನಡೆಸಲಾಯಿತು.
ವ್ಯಾಪಾರ ಭವನದಿಂದ ಪ್ರತಿಭಟನಾ ಮೆರವಣಿಗೆ ಆರಂಭಿಸಲಾಯಿತು. ಘಟಕದ ಉಪಾಧ್ಯಕ್ಷ ಹಮೀದ್ ಬರಕಾ ಅಧ್ಯಕ್ಷತೆಯಲ್ಲಿ ಜಿಲ್ಲಾ ಕಾರ್ಯದರ್ಶಿ ಅನ್ವರ್ ಸಾದತ್ ಉದ್ಘಾಟಿಸಿದರು. ಘಟಕ ಕೋಶಾಧಿಕಾರಿ ಜ್ಞಾನದೇವ ಶೆಣೈ, ವನಿತಾವಿಂಗ್ ಪ್ರಧಾನ ಕಾರ್ಯದರ್ಶಿ ಕೃಪಾ ಯತೀಶ್, ಯೂತ್‍ವಿಂಗ್ ಪ್ರಧಾನ ಕಾರ್ಯದರ್ಶಿ ಶಾಹಿದ್ ಮಾತನಾಡಿದರು. ಘಟಕ ಪ್ರಧಾನ ಕಾರ್ಯದರ್ಶಿ ರವಿ ನವಶಕ್ತಿ ಸ್ವಾಗತಿಸಿ, ಕಾರ್ಯದರ್ಶಿ ಉದಯಶಂಕರ ವಂದಿಸಿದರು. ಗ್ರಾಮಪಂಚಾಯಿತಿ ಕಾರ್ಯದರ್ಶಿಗೆ ಮನವಿಯನ್ನು ನೀಡಲಾಯಿತು.




.jpg)

