ಬದಿಯಡ್ಕ : ಕಡಾರ್ ಪುಂಗೋಡಿ ಮಾಡ ಮಾಡತಡ್ಕ ಶ್ರೀ ಕಿನ್ನಿಮಾಣಿ ಪೂಮಾಣಿ ಯಕ್ಷಗಾನ ಕಲಾಸಂಘದ ಸುವರ್ಣ ಮಹೋತ್ಸವದ ಪ್ರಯುಕ್ತ ಸಭಾ ಕಾರ್ಯಕ್ರಮದಲ್ಲಿ ವಿವಿಧ ಗಣ್ಯರನ್ನು ಸನ್ಮಾನಿಸಲಾಯಿತು.
ಕಳೆದ ನಾಲ್ಕು ದಶಕಗಳಿಂದ ಧಾರ್ಮಿಕ ಸಾಮಾಜಿಕ, ಸಾಂಸ್ಕೃತಿಕ ರಾಜಕೀಯ ರಂಗದಲ್ಲಿ ತೊಡಗಿಕೊಂಡಿರುವ ಪೆರಡಾಲಗುತ್ತು ಚಂದ್ರಹಾಸ ರೈ ಇವರನ್ನು ಸನ್ಮಾನಿಸಲಾಯಿತು.. ಫಲ ಪುಷ್ಪ ತಾಂಬೂಲ ಸ್ಮರಣೆಕೆ ನೀಡಿ ಸನ್ಮಾನಿಸಲಾಯಿತು
ಯಕ್ಷಗಾನ ಕಲಾ ಸಂಘದ ಅಧ್ಯಕ್ಷ ರಮಾನಾಥ ರೈ ಮೇಗಿನ ಕಡಾರು, ಪ್ರಾರ್ಥಿಸುಬ್ಬ ಯಕ್ಷಗಾನ ಕಲಾ ಸಂಘದ ಮಾಜಿ ಅಧ್ಯಕ್ಷ ಶಂಕರ ರೈ ಮಾಸ್ತರ್, ಕಡಾರು ಬೀಡಿನ ಯಜಮಾನ ಜಗನ್ನಾಥ ರೈ, ಸೀನಪ್ಪ ರೈ ಮಚ್ಚಿರ್ಕವೆ, ಜನಪ್ರತಿನಿಧಿ ಬಾಲಕೃಷ್ಣ ರೈ ಮೇಗಿನ ಕಡಾರು, ಮಂಜಪ್ಪ ಕುಲಾಲ್, ಅಖಿಲೇಶ್ ನಗುಮುಖಂ, ದಯಾನಂದ ರೈ ಮೇಗಿನ ಕಡಾರು, ಉಮೇಶ್ ರೈ ಉಪಸ್ಥಿತರಿದ್ದರು.




.jpg)

