ಬದಿಯಡ್ಕ: ಏತಡ್ಕ ಶ್ರೀ ಸದಾಶಿವ ದೇವಸ್ಥಾನದ ಬ್ರಹ್ಮಕಲಶೋತ್ಸವು ಫೆ.11ರಂದು ಆರಂಭವಾಗಿದ್ದು 4ನೇ ದಿನ ಶುಕ್ರವಾರ ಬೆಳಗ್ಗೆ ಗಣಪತಿ ಹೋಮ, ತತ್ವಹೋಮ, ತತ್ವಕಲಶ ಪೂಜೆ, ತತ್ವಕಲಶಾಭಿಷೇಕ, ಅನುಜ್ಞಾ ಕಲಶಾಭಿಷೇಕ, ತ್ರಿಕಾಲ ಪೂಜೆ, ಜರಗಿತು. ಸಂಜೆ ಅನುಜ್ಞಾ ಬಲಿ, ಕ್ಷೇತ್ರಪಾಲನಲ್ಲಿ ಅನುಜ್ಞಾ ಪ್ರಾರ್ಥನೆ, ಬಿಂಬಶುದ್ಧಿ, ಕಲಶಪೂಜೆ, ಅಂಕುರಪೂಜೆ, ಮಹಾಪೂಜೆ ನಡೆಯಿತು. ಭಜನಾರ್ಪಣಮ್-ಸಾಮಗಾನಪ್ರಿಯ ವೇದಿಕೆಯಲ್ಲಿ ವಿವಿಧ ತಂಡಗಳಿಂದ ಭಜನೆ, ಕಲಾರ್ಪಣಮ್-ನಟರಾಜ ವೇದಿಕೆಯಲ್ಲಿ ‘ಶಕ್ತಿ ಮಹಿಳಾ ಯಕ್ಷಬಳಗ ಪುತ್ತೂರು ಇವರಿಂದ ತಾಳಮದ್ದಳೆ, ಮಧ್ಯಾಹ್ನ ದಾಸ ಸಂಕೀರ್ತನೆ, ಸಂಜೆ ಪೆರ್ಲದ ಪಡ್ರೆಚಂದು ಸ್ಮಾರಕ ಯಕ್ಷಗಾನ ಕೇಂದ್ರದವರಿಂದ ಮೀನಾಕ್ಷಿಕಲ್ಯಾಣ ಯಕ್ಷಗಾನ ಬಯಲಾಟ, ವಿದುಷಿ ಡಾ.ಶಾರದಾ ಸ್ಪೂರ್ತಿ ಪೈ ಅವರ ಶಿಷ್ಯವೃಂದದವರಿಂದ ಭರತನಾಟ್ಯ ಪ್ರದರ್ಶನ, ರಾತ್ರಿ ಬಾಯಾರು ಮಹಮ್ಮಾಯಿ ಯಕ್ಷಗಾನ ಕಲಾಸಂಘದವರಿಂದ ಯಕ್ಷಗಾನ ತಾಳಮದ್ದಳೆ ಭೀಷ್ಮ ವಿಜಯ ಪ್ರದರ್ಶನಗೊಂಡಿತು.
ಇಂದಿನ ಕಾರ್ಯಕ್ರಮ:
ಶನಿವಾರ ಬೆಳಿಗ್ಗೆ 6 ರಿಂದ ಗಣಪತಿಹೋಮ, ತ್ರಿಕಾಲಪೂಜೆ, ಸಂಹಾರ ತತ್ವಹೋಮ, ತತ್ವಕಲಶ ಪೂಜೆ, ಕುಂಭೇಶ ಕರ್ಕರಿ ಪೂಜೆ, ಶಯ್ಯಾಪೂಜೆ, ಅಧಿವಾಸ ಹೋಮದ ಅಗ್ನಿ ಜನನ, ಜೀವಕಲಶ, ಶಯ್ಯೋನ್ನಯನ, ಮಧ್ಯಾಹ್ನ 12 ರಿಂದ ಅಂಕುರಪೂಜೆ, ಮಹಾಪೂಜೆ, ಸಂಜೆ 6 ರಿಂದ ಧ್ಯಾನಾಧಿವಾಸ, ಅಧಿವಾಸ ಹೋಮ, ಶಿರಸ್ತತ್ವಹೋಮ, ಪ್ರತಿಷ್ಠಾ ಹೋಮ, ಪುಣ್ಯಾಹವಾಚನ, ಪ್ರಾಸ ಶುದ್ಧಿ, ರಾಕ್ಷೋಘ್ನ ಹೋಮ, ವಾಸ್ತುಹೋಮ, ವಾಸ್ತುಬಲಿ, ವಾಸ್ತು ಪುಣ್ಯಾಹಾಂತ, ಬ್ರಹ್ಮಕಲಶ, ಮಹಾಪೂಜೆ ನಡೆಯಲಿದೆ.
ಬೆಳಿಗ್ಗೆ 8.30 ರಿಂದ ಭಜನಾರ್ಪಣಮ್-ಸಾಮಗಾನಪ್ರಿಯ ವೇದಿಕೆಯಲ್ಲಿ ವಿವಿಧ ತಂಡಗಳಿಂದ ಭಜನೆ, ಕಲಾರ್ಪಣಮ್ -ನಟರಾಜ್ ವೇದಿಕೆಯಲ್ಲಿ ಬೆಳಿಗ್ಗೆ 10 ರಿಂದ 12ರ ವರೆಗೆ ರಾಗಾಲಾಪನೆ, 12 ರಿಂದ 1 ರ ವರೆಗೆ ಭರತನಾಟ್ಯ ಪ್ರದರ್ಶನ, ಸಂಜೆ 4.30 ರಿಂದ ಶಿವಸಂಕೀತ್ಣೆ ಮತ್ತು ಸಾಮೂಹಿಕ ಸಾಂಬಸದಾಶಿವ ನಾಮಾರ್ಚನೆ, ಬೃಹತ್ ಕುಣಿತ ಭಜನೆ, 6.30 ರಿಂದ ದಾಸಸಂಕೀರ್ತನೆ, ರಾತ್ರಿ 8.30 ರಿಂದ ಭರತನಾಟ್ಯ ಮತ್ತು ನೃತ್ಯವೈವಿಧ್ಯ ನಡೆಯಲಿದೆ.




.jpg)

