HEALTH TIPS

ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಕಾರಿ ಉಪಕ್ರಮ 'ಕನಿಷ್ಠ ವಿಷಯ’ ಯೋಜನೆ ಈ ವರ್ಷ ಪ್ರಾರಂಭ: ಸಚಿವ ವಿ. ಶಿವನ್‍ಕುಟ್ಟಿ- ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್‍ನ ಭಾಗವಾಗಿ ಕಾನತ್ತೂರು ಸರ್ಕಾರಿ ಯುಪಿ ಶಾಲೆಯಲ್ಲಿ ನಿರ್ಮಿಸಲಾದ ಹೊಸ ಕಟ್ಟಡ ಉದ್ಘಾಟನೆ .

ಕಾಸರಗೋಡು: ರಾಜ್ಯದ ಶಾಲೆಗಳಲ್ಲಿ ಪರಿಣಾಮಕಾರಿ ಮತ್ತು ಕಠಿಣ ಶೈಕ್ಷಣಿಕ ಚಟುವಟಿಕೆಗಳು, ಪರೀಕ್ಷೆಗಳು ಮತ್ತು ಮೌಲ್ಯಮಾಪನಗಳನ್ನು ಖಚಿತಪಡಿಸಿಕೊಳ್ಳಲು ವಿನ್ಯಾಸಗೊಳಿಸಲಾದ ಕನಿಷ್ಠ ವಿಷಯ ಯೋಜನೆಯನ್ನು ಈ ವರ್ಷ ಪ್ರಾರಂಭಿಸಲಾಗುವುದು ಎಂದು ಉದ್ಯೋಗ ಮತ್ತು ಸಾಮಾನ್ಯ ಶಿಕ್ಷಣ ಸಚಿವ ವಿ. ಶಿವನ್‍ಕುಟ್ಟಿ ಮಾಹಿತಿ ನೀಡಿದರು.

ಕಾನತ್ತೂರು ಸರ್ಕಾರಿ ಯುಪಿ ಶಾಲೆಯಲ್ಲಿ ನಿರ್ಮಿಸಲಾದ ನೂತನ ಕಟ್ಟಡವನ್ನು ಇತ್ತೀಚೆಗೆ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.


ಈ ಕಟ್ಟಡವನ್ನು ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್‍ನಲ್ಲಿ ಸೇರಿಸಲಾಗಿದ್ದು, 1.34 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ.

"ಕನಿಷ್ಠ ವಿಷಯ ಯೋಜನೆಯು ತರಗತಿಯ ಪ್ರತಿಯೊಬ್ಬ ವಿದ್ಯಾರ್ಥಿಯೂ ಯಶಸ್ವಿಯಾಗಲು ಅಗತ್ಯವಾದ ಕೌಶಲ್ಯಗಳನ್ನು ಹೊಂದುವುದನ್ನು ಖಚಿತಪಡಿಸುತ್ತದೆ ಮತ್ತು ಮಕ್ಕಳು ತಮ್ಮ ಪೂರ್ಣ ಸಾಮಥ್ರ್ಯವನ್ನು ತಲುಪಲು ಸಹಾಯ ಮಾಡುತ್ತದೆ." ಇದರ ಮೊದಲ ಹಂತವನ್ನು ಈ ವರ್ಷ 8ನೇ ತರಗತಿಯಲ್ಲಿ ಜಾರಿಗೆ ತರಲಾಗುವುದು. ಈ ಯೋಜನೆಯನ್ನು 2026 ರ ವೇಳೆಗೆ 8, 9 ಮತ್ತು 10 ನೇ ತರಗತಿಗಳಿಗೆ ವಿಸ್ತರಿಸಲಾಗುವುದು" ಎಂದು ಸಚಿವರು ಹೇಳಿದರು.

ಹೊಸ ಯೋಜನೆಯ ಲಕ್ಷ್ಯ ಪ್ರಾಪ್ತಿಯತ್ತ ಪಯಣ ಎಂದು ಸಚಿವರು ಒತ್ತಿ ಹೇಳಿದರು. "ಕನಿಷ್ಠ ವಿಷಯದ ಮುಖ್ಯ ಗುರಿ ಯಾವುದೇ ಮಗುವನ್ನು ಶಾಲಾ ಶಿಕ್ಷಣದಿಂದ ಹೊರಗಿಡುವುದು ಅಲ್ಲ, ಬದಲಾಗಿ ಕಲಿಕೆಯ ಬೆಂಬಲದ ಅಗತ್ಯವಿರುವ ಮಕ್ಕಳು ಬೆಳೆಯಲು ಮತ್ತು ಅಭಿವೃದ್ಧಿ ಹೊಂದಲು ಪ್ರತಿಯೊಂದು ಅವಕಾಶವನ್ನೂ ಒದಗಿಸುವುದು." ಯಾವುದೇ ವಿದ್ಯಾರ್ಥಿಯೂ ಕಲಿಕೆಯಲ್ಲಿ ಹಿಂದುಳಿಯದಂತೆ ನೋಡಿಕೊಳ್ಳುವುದು ಮತ್ತು ಪ್ರತಿಯೊಬ್ಬ ವಿದ್ಯಾರ್ಥಿಯು ಒಂದು ತರಗತಿಯಿಂದ ಇನ್ನೊಂದು ತರಗತಿಗೆ ಆತ್ಮವಿಶ್ವಾಸದಿಂದ ಮುನ್ನಡೆಯುವಂತೆ ಮಾಡುವುದಾಗಿದೆ.  ಶಿಕ್ಷಣದಲ್ಲಿ ಯಶಸ್ವಿಯಾಗಲು ಅಗತ್ಯವಾದ ಜ್ಞಾನ ಮತ್ತು ಕೌಶಲ್ಯಗಳೊಂದಿಗೆ ಸಜ್ಜಾಗಿರುವುದನ್ನು ಖಚಿತಪಡಿಸಿಕೊಳ್ಳುವುದು ಗುರಿಯಾಗಿದೆ ಎಂದು ಸಚಿವರು ಹೇಳಿದರು.


ಆರು ತರಗತಿ ಕೊಠಡಿಗಳು ಮತ್ತು ಸಂಬಂಧಿತ ಸೌಲಭ್ಯಗಳನ್ನು ಹೊಂದಿರುವ ಮೂರು ಅಂತಸ್ತಿನ ಕಟ್ಟಡವನ್ನು ಸಚಿವರು ಉದ್ಘಾಟಿಸಿದರು. ಶಾಸಕ ವಕೀಲ ಸಿ. ಎಚ್. ಕುಂಞಂಬು ಅಧ್ಯಕ್ಷತೆ ವಹಿಸಿದ್ದರು. ಸಂಸದ ರಾಜಮೋಹನ್ ಉಣ್ಣಿತ್ತಾನ್ ಕಂಪ್ಯೂಟರ್ ಲ್ಯಾಬ್ ಅನ್ನು ಉದ್ಘಾಟಿಸಿದರು. ಮುಳಿಯಾರ್ ಗ್ರಾಮ ಪಂಚಾಯತಿ ಉಪಾಧ್ಯಕ್ಷ ಎ. ಜನಾರ್ದನನ್, ಜಿಲ್ಲಾ ಪಂಚಾಯತಿ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ವಕೀಲೆ ಎಸ್.ಎನ್. ಸರಿತಾ,  ಮುಳಿಯಾರ್ ಗ್ರಾಮ ಪಂಚಾಯತಿ ಶಿಕ್ಷಣ ಸ್ಥಾಯಿ ಸಮಿತಿಯ ಅಧ್ಯಕ್ಷೆ ಇ. ಮೋಹನನ್, ಲೋಕೋಪಯೋಗಿ ಇಲಾಖೆ ಕಾರ್ಯನಿರ್ವಾಹಕ ಎಂಜಿನಿಯರ್ ಅನೀಸಾ ಮನ್ಸೂರ್ ಮಲ್ಲ, ಎಂ.ಪಿ. ಸಜಿತ್, ಶಿಕ್ಷಣ ಉಪ ನಿರ್ದೇಶಕ ಟಿ.ವಿ. ಮಧುಸೂದನನ್, ಕಾಸರಗೋಡು ಎಇಒ ಆಗಸ್ಟೀನ್ ಬರ್ನಾರ್ಡ್ ಮೊಂತೇರೊ, ವಿವಿಧ ಪಕ್ಷ, ಸಂಘಟನೆಗಳ ಪ್ರತಿನಿಧಿಗಳಾದ ಅಶೋಕನ್ ಮಾಸ್ತರ್, ಪ್ರಭಾಕರನ್ ಚೆಟ್ಟತ್ತೋಡು, ಪಿಟಿಎ ಅಧ್ಯಕ್ಷ ಕೆ.ಪಿ. ಪವಿತ್ರನ್, ಎಸ್‍ಎಂಸಿ ಅಧ್ಯಕ್ಷ ಕೆ.ಪಿ. ಪ್ರಸನ್ನನ್, ಎಂಪಿಟಿಎ ಅಧ್ಯಕ್ಷೆ ರಮ್ಯಾ ಪಯೋಲಂ, ಒಎಸ್.ಎ. ಕಾರ್ಯದರ್ಶಿ ಪ್ರಶಾಂತ್ ಮಾಸ್ತರ್ ಮಾತನಾಡಿದರು. ಮುಳಿಯಾರ್ ಗ್ರಾಮ ಪಂಚಾಯತಿ ಅಧ್ಯಕ್ಷೆ ಪಿ.ವಿ. ಮಿನಿ ಸ್ವಾಗತಿಸಿ, ಮುಖ್ಯೋಪಾಧ್ಯಾಯ ವಿ.ಎಂ. ಕೃಷ್ಣಪ್ರಸಾದ್ ವಂದಿಸಿದರು. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries