ಕಾಸರಗೋಡು: ಕಣ್ಣೂರು ಜಿಲ್ಲೆಯ ಆರಳಂ ಫಾರ್ಮ್‍ನಲ್ಲಿ ವೃದ್ಧ ದಂಪತಿ ಕಾಡಾನೆ ದಾಳಿಗೆ ಬಲಿಯಾಗಿರುವುದನ್ನು ಖಂಡಿಸಿ ಬಿಜೆಪಿ ಮತ್ತು ಕಾಂಗ್ರೆಸ್ ವತಿಯಿಂದ ಆರಳಂ ಪಂಚಾಯಿತಿ ವ್ಯಾಪ್ತಿಯಲ್ಲಿ ಸೋಮವಾರ ಹರತಾಳ ಆಚರಿಸಲಾಯಿತು. ಕಾಡಾನೆ ದಾಳಿ ಹಿನ್ನೆಲೆಯಲ್ಲಿ ವಿಪತ್ತು ನಿವರಣಾ ಪ್ರಾಧಿಕಾರ ವತಿಯಿಮದ ಸರ್ವಪಕ್ಷ ಸಭೆ ನಡೆಸಲಾಯಿತು. ಅರಣ್ಯ ಖಾತೆ ಸಚಿವ ಎ.ಕೆ ಶಶೀಂದ್ರನ್ ಪಾಲ್ಗೊಂಡಿದ್ದರು.
ಈ ಮಧ್ಯೆ ಕಾಡಾನೆ ದಾಳಿಯಿಂದ ಮೃತಪಟ್ಟ ಬೆಳ್ಳಿ ಹಾಗೂ ಇವರ ಪತ್ನಿ ಲೀಲಾ ಅವರ ಮೃತದೇಹ ಪರಿಯಾರಂ ವಐದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಶವಮಹಜರು ನಡೆಸಲಾಯಿತು. ಕಾಡಾನೆ ದಳಿ ಖಂಡಿಸಿ ಭಾನುವಾರ ದಂಪತಿ ಮೃತದೇಹ ಆಸ್ಪತ್ರೆಗೆ ಕೊಂಡೊಯ್ಯಲು ಆಗಮಿಸಿದ್ದ ಆಂಬುಲೆನ್ಸ್ ವಾಹನಕ್ಕೆ ನಾಗರಿಕರು ತಡೆಯೊಡ್ಡಿ ಪ್ರತಿಭಟನೆ ವ್ಯಕ್ತಪಡಿಸಿದ್ದರು. ನಂತರ ಪೊಲೀಸರು ನಾಗರಿಕರನ್ನು ಸಮಾಧಾನಪಡಿಸಿ ಚದುರಿಸಿದ್ದರು.
ಆರಂಳಂನಲ್ಲಿ ಗೇರುಬೀಜ ಸಂಗ್ರಹಕ್ಕಾಗಿ ತೆರಳಿದ್ದ ಆರಳಂ ನಿವಾಸಿಗಳು ಹಾಗೂ ಆದಿವಾಸಿ ಜನಾಂಗದ ಬೆಳ್ಳಿ(82)ಹಾಗೂ ಇವರ ಪತ್ನಿ ಲೀಲಾ(70) ಅವರನ್ನು ಕಾಡಾನೆ ತುಳಿದು ಸಾಯಿಸಿತ್ತು.




