ನವದೆಹಲಿ: ಪಕ್ಷಕ್ಕೆ ತನ್ನ ಸೇವೆಗಳು ಅಗತ್ಯವಿಲ್ಲದಿದ್ದರೆ ಬೇರೆ ಆಯ್ಕೆಗಳನ್ನು ಹುಡುಕುವುದಾಗಿ ಸಂಸದ ಶಶಿ ತರೂರ್ ಎಚ್ಚರಿಸಿದ್ದಾರೆ. ರಾಷ್ಟ್ರೀಯ ಮಾಧ್ಯಮ(ಇಂಡಿಯನ್ ಎಕ್ಸ್ ಫ್ರೆಸ್ಸ್) ಕ್ಕೆ ನಿನ್ನೆ ನೀಡಿದ ಸಂದರ್ಶನದಲ್ಲಿ ತರೂರ್ ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ.
2024 ರ ಲೋಕಸಭಾ ಚುನಾವಣೆಗಳಲ್ಲಿ ಪರಾಭವಗೊಂಡ ನಂತರ ಕಾಂಗ್ರೆಸ್ ಸತತ ವಿಧಾನಸಭಾ ಚುನಾವಣೆ ಸೋಲುಗಳನ್ನು ಎದುರಿಸುತ್ತಿರುವುದರಿಂದ, ಪಕ್ಷವು ತನ್ನ ಬದ್ಧ ಮತದಾರರ ನೆಲೆಯನ್ನು ಮೀರಿ ಜನರನ್ನು ತೊಡಗಿಸಿಕೊಳ್ಳಬೇಕಾಗುತ್ತದೆ ಮತ್ತು ತನಗೆ ವೈಯಕ್ತಿಕವಾಗಿ ದೊರೆತ ಬೆಂಬಲ ಅದಕ್ಕೆ ಉದಾಹರಣೆಯಾಗಿದೆ ಎಂದು ತರೂರ್ ಹೇಳಿದರು.
ಕಾಂಗ್ರೆಸ್ ಜನರನ್ನು ತನ್ನ ಕಡೆ ಸೆಳೆಯಲು ಸಾಧ್ಯವಾಗದಿದ್ದರೆ, ಮುಂದಿನ ಬಾರಿಯೂ ಕೇರಳದಲ್ಲಿ ವಿರೋಧ ಪಕ್ಷದಲ್ಲಿ ಇರಬೇಕಾಗುತ್ತದೆ ಎಂದು ಅವರು ಹೇಳಿದರು. ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್ ಮತಗಳು ಸುಮಾರು 19% ರಷ್ಟಿದ್ದವು. ಹೆಚ್ಚುವರಿಯಾಗಿ ಶೇ.26-27 ರಷ್ಟು ಸಿಕ್ಕರೆ ಮಾತ್ರ ನಾವು ಅಧಿಕಾರಕ್ಕೆ ಬರಲು ಸಾಧ್ಯ. ಹಾಗಾಗಿ, ಕಳೆದ ಎರಡು ಚುನಾವಣೆಗಳಲ್ಲಿ ನಮ್ಮನ್ನು ಬೆಂಬಲಿಸದವರು ನಮಗೆ ಬೇಕು.
"ಪಕ್ಷಕ್ಕೆ ಅದು ಬೇಡವಾದರೆ, ನನಗೆ ನನ್ನದೇ ಆದ ಕೆಲಸಗಳಿವೆ." ಪ್ರಪಂಚದ ವಿವಿಧ ಭಾಗಗಳಿಂದ ಪುಸ್ತಕಗಳನ್ನು ಬರೆಯಲು, ಭಾಷಣಗಳನ್ನು ನೀಡಲು ಮತ್ತು ಮಾತನಾಡಲು ಆಹ್ವಾನಗಳು ಬರುತ್ತಿವೆ. ನನಗೆ ಮನವರಿಕೆಯಾಗಿರುವ ವಿಷಯದ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸುವ ಮೊದಲು ರಾಜಕೀಯ ಪರಿಣಾಮಗಳ ಬಗ್ಗೆ ನಾನು ಎಂದಿಗೂ ಯೋಚಿಸಿಲ್ಲ. ಅದಕ್ಕಾಗಿಯೇ ನಾನು ಕೆಲವೊಮ್ಮೆ ಕಾಂಗ್ರೆಸ್‍ಗೆ ಪ್ರತಿಸ್ಪರ್ಧಿಗಳಾಗಿರುವ ಸರ್ಕಾರಗಳು ಅಥವಾ ಪಕ್ಷಗಳ ಉತ್ತಮ ಉಪಕ್ರಮಗಳನ್ನು ಹೊಗಳುತ್ತೇನೆ.
ನನ್ನ ಹೇಳಿಕೆಗಳಿಗೆ ಸಾರ್ವಜನಿಕರಿಂದ ನಕಾರಾತ್ಮಕ ಪ್ರತಿಕ್ರಿಯೆ ಬಂದಿರುವುದನ್ನು ನಾನು ಎಂದಿಗೂ ನೋಡಿಲ್ಲ. ಆದರೆ ಅದು ತನ್ನ ಪಕ್ಷದಿಂದಲೇ ಬರುತ್ತಿದೆ. ನಮ್ಮ ವಿರೋಧಿಗಳ ಬಗ್ಗೆ ನೀವು ಏಕೆ ಚೆನ್ನಾಗಿ ಮಾತನಾಡುತ್ತೀರಿ ಎಂದು ಅವರು ನನ್ನನ್ನು ಕೇಳುತ್ತಾರೆ. "ಹೌದು, ಅವರು ನಮ್ಮ ಪ್ರತಿಸ್ಪರ್ಧಿಗಳು, ಆದರೆ ಅವರು ಒಳ್ಳೆಯ ಕೆಲಸಗಳನ್ನು ಮಾಡಿದಾಗ, ನಾವು ಅವರನ್ನು ಅಭಿನಂದಿಸಬೇಕು" ಎಂದು ತರೂರ್ ಹೇಳಿರುವರು.






