ನವದೆಹಲಿ: ವಾರದಲ್ಲಿ ಕೆಲಸದ ಗರಿಷ್ಠ ಅವಧಿಯನ್ನು 70 ಅಥವಾ 90 ಗಂಟೆಗೆ ಏರಿಸಬೇಕೆಂಬ ಯಾವುದೇ ಪ್ರಸ್ತಾವವನ್ನು ಪರಿಗಣಿಸಿಲ್ಲ ಎಂದು ಸರ್ಕಾರ ಸೋಮವಾರ ಸಂಸತ್ತಿಗೆ ತಿಳಿಸಿತು.
'ಕಾರ್ಮಿಕರು ಸಮವರ್ತಿ ಪಟ್ಟಿಯಲ್ಲಿ ಬರುತ್ತಾರೆ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ತಮ್ಮ ವ್ಯಾಪ್ತಿಯ ಒಳಗೆ ಕಾರ್ಮಿಕ ಕಾನೂನುಗಳನ್ನು ಜಾರಿ ಮಾಡುತ್ತವೆ' ಎಂದು ಕಾರ್ಮಿಕ ಮತ್ತು ಉದ್ಯೋಗ ರಾಜ್ಯ ಖಾತೆ ಸಚಿವೆ ಶೋಭಾ ಕರಂದ್ಲಾಜೆ ಅವರು ಲಿಖಿತ ಉತ್ತರ ನೀಡಿದರು.
ಅಸ್ತಿತ್ವದಲ್ಲಿರುವ ಕಾರ್ಮಿಕ ಕಾನೂನುಗಳ ಪ್ರಕಾರ, ಕೆಲಸದ ಸಮಯ ಮತ್ತು ಹೆಚ್ಚುವರಿ ಅವಧಿ ಸೇರಿದಂತೆ ಕೆಲಸದ ಪರಿಸ್ಥಿತಿಗಳನ್ನು 1948ರ ಕಾರ್ಖಾನೆ ಕಾಯ್ದೆ ಮತ್ತು ಆಯಾ ರಾಜ್ಯ ಸರ್ಕಾರಗಳ ಅಂಗಡಿಗಳು ಮತ್ತು ಕಂಪನಿಗಳ ಕಾಯ್ದೆಯ ನಿಬಂಧನೆಗಳ ಮೂಲಕ ನಿಯಂತ್ರಿಸಲಾಗುತ್ತದೆ.
ಇತ್ತೀಚೆಗೆ ಕೆಲ ಕಾರ್ಪೊರೇಟ್ ಕಂಪನಿಗಳ ವರಿಷ್ಠರು ಕೆಲಸದ ಗರಿಷ್ಠ ಅವಧಿಯನ್ನು ವಾರಕ್ಕೆ 70 ಅಥವಾ 90 ಗಂಟೆಗಳವರೆಗೆ ಹೆಚ್ಚಿಸಬೇಕು ಎಂದು ಹೇಳಿಕೆ ನೀಡಿದ್ದರು.




