ನವದೆಹಲಿ: ಅಂಗವಿಕಲತೆಗೆ ಸಂಬಂಧಿಸಿದಂತೆ ನಿಗದಿತ ಮಾನದಂಡಗಳನ್ನು ಪೂರೈಸದಿರುವ ಎಲ್ಲ ಅಂಗವಿಕಲರೂ ಪರೀಕ್ಷೆಗಳನ್ನು ಬರೆಯಲು ಲಿಪಿಕಾರರ ನೆರವನ್ನು ಪಡೆಯಬಹುದು ಎಂದು ಸುಪ್ರೀಂ ಕೋರ್ಟ್ ಸೋಮವಾರ ತಿಳಿಸಿದೆ.
ನಿರ್ದಿಷ್ಟ ಅಂಗವೈಕಲ್ಯದ ಪ್ರಮಾಣ ಶೇ 40ಕ್ಕಿಂತಲೂ ಹೆಚ್ಚಿರುವ ವ್ಯಕ್ತಿಗೆ ಸಕ್ಷಮ ಪ್ರಾಧಿಕಾರವು ಪ್ರಮಾಣಪತ್ರ ನೀಡುತ್ತದೆ.
ಆದರೆ ಈ ಮಾನದಂಡ ಪೂರೈಸಲು ಆಗದ ಅಂಗವಿಕಲರಿಗೂ ಈ ಸೌಲಭ್ಯ ವಿಸ್ತರಿಸುವಂತೆ ನ್ಯಾಯಾಲಯ ಸೂಚಿಸಿದೆ.
ಈ ಕುರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಜೆ.ಬಿ.ಪಾರ್ದೀವಾಲಾ ಮತ್ತು ಆರ್. ಮಹದೇವನ್ ಅವರ ಪೀಠವು, ಈ ನಿಟ್ಟಿನಲ್ಲಿ ಸಮರ್ಪಕ ಮತ್ತು ನ್ಯಾಯಯುತ ಅನುಸರಣೆಯನ್ನು ಖಚಿತಪಡಿಸಿಕೊಳ್ಳುವುದು ಕೇಂದ್ರ ಸರ್ಕಾರದ ಜವಾಬ್ದಾರಿ ಎಂದು ಹೇಳಿದೆ.




