ಕೊಚ್ಚಿ: ಮುಂಬೈ ಮೂಲದ ಬಿರ್ಲಾ ಗ್ರೂಪ್‍ನ ಚಲನಚಿತ್ರ ನಿರ್ಮಾಣ ಕಂಪನಿಯಾದ ಅಪ್ಲಾಸ್ ಎಂಟರ್‍ಟೈನ್‍ಮೆಂಟ್, ಸಿಸ್ಟರ್ ಅಭಯ ಪ್ರಕರಣದ ಆಕ್ಷನ್ ಕೌನ್ಸಿಲ್ ಕನ್ವೀನರ್ ಆಗಿ ಪ್ರಸಿದ್ಧರಾಗಿರುವ ಜೋಮನ್ ಪುತನ್‍ಪುರಕ್ಕಲ್ ಅವರ ಕುರಿತು ಸಾಕ್ಷ್ಯಚಿತ್ರವನ್ನು ನಿರ್ಮಿಸುತ್ತಿದೆ.
ಈ ಬಗ್ಗೆ ಜೋಮನ್ ಅವರೇ ಪತ್ರಕರ್ತರಿಗೆ ಮಾಹಿತಿ ನೀಡಿದ್ದಾರೆ. ಈ ಸಾಕ್ಷ್ಯಚಿತ್ರವು ಜೋಮನ್ ಅವರ ಆತ್ಮಚರಿತ್ರೆ 'ಗಾಡ್ಸ್ ಓನ್ ಲಾಯರ್' ಅನ್ನು ಆಧರಿಸಿದೆ.
ಖ್ಯಾತ ಮಾನವ ಹಕ್ಕುಗಳ ಕಾರ್ಯಕರ್ತ ಜೋಮನ್, ಕೊಟ್ಟಾಯಂ ಜಿಲ್ಲೆಯ ಅರಿಕ್ಕಾರದ ನಿವಾಸಿ. ಆರಂಭದಲ್ಲಿ ತನಿಖೆಯನ್ನು ಹಾಳುಗೆಡವಿ ಆತ್ಮಹತ್ಯೆ ಎಂದು ತೀರ್ಪು ನೀಡಲಾಗಿದ್ದ ಸಿಸ್ಟರ್ ಅಭಯ ಕೊಲೆ ಪ್ರಕರಣದ ನಿಗೂಢತೆಗಳನ್ನು ಬಹಿರಂಗಪಡಿಸುವಲ್ಲಿ ಜೋಮನ್ ಆಕ್ಷನ್ ಕೌನ್ಸಿಲ್ ಪ್ರಮುಖ ಪಾತ್ರ ವಹಿಸಿತು. 2009 ರಲ್ಲಿ, ಸಿಸ್ಟರ್ ಅಭಯ ಅವರ ಕೊಲೆಗೆ ಸಂಬಂಧಿಸಿ 'ಅಭಯ ಕೇಸ್ ಡೈರಿ' ಎಂಬ ಪುಸ್ತಕವನ್ನು ಬಿಡುಗಡೆ ಮಾಡಿದ್ದರು, ಈ ಕೃತಿಯು ಪ್ರಕರಣದ ಆರಂಭದಿಂದಲೂ ಉನ್ನತ ಮಟ್ಟದ ಪ್ರಭಾವಗಳನ್ನು ವಿವರಿಸುತ್ತದೆ.






