ಮಂಜೇಶ್ವರ: ಯುವ ನಾಯಕತ್ವ ಸಂಘಟನೆಯ ಬೆಳವಣಿಗೆಯ ಸಂಕೇತ, ಆದರ್ಶ ಬಿ ಎಂ ರಂತಹ ವಿದ್ಯಾವಂತ, ವಾಗ್ಮಿ, ಸಂಘಟನ ಚತುರರರು ಪಕ್ಷದ ಅಸ್ತಿ. ಅವರನ್ನು ಗುರುತಿಸಿ ಪಕ್ಷ ಮಂಜೇಶ್ವರ ದಂತಹ ಕೇರಳದಲ್ಲೇ ಬಲಿಷ್ಠ ಮಂಡಲದ ಅಧ್ಯಕ್ಷ ಸ್ಥಾನ ನೀಡಿರುವುದು ಪಕ್ಷಸಂಘಟನೆಗೆ ಪೂರಕ ವಾಗಲಿದೆ ಎಂದು ಬಿಜೆಪಿ ರಾಜ್ಯ ಕಾರ್ಯದರ್ಶಿ ನ್ಯಾಯವಾದಿ.ಕೆ. ಶ್ರೀಕಾಂತ್ ಹೇಳಿದರು.
ಹೊಸಂಗಡಿ ಪ್ರೇರಣಾದಲ್ಲಿ ಭಾನುವಾರ ನಡೆದ ಬಿಜೆಪಿ ಮಂಜೇಶ್ವರ ಮಂಡಲ ಅಧ್ಯಕ್ಷ ಆದರ್ಶ ಬಿ ಎಂ ಪದಗ್ರಹಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಬಿಜೆಪಿ ಜಿಲ್ಲಾ ಅಧ್ಯಕ್ಷೆ ಎಂ ಎಲ್ ಅಶ್ವಿನಿ, ಮಾಜಿ ಅಧ್ಯಕ್ಷ ಕುಂಟಾರು ರವೀಶ್ ತಂತ್ರಿ, ವಿಜಯ್ ಕುಮಾರ್ ರೈ, ಎ.ಕೆ.ಕಯ್ಯಾರು ಉಪಸ್ಥಿತರಿದ್ದರು ಮಣಿಕಂಠ ರೈ ಅಧ್ಯಕ್ಷತೆ ವಹಿಸಿದ್ದರು, ದೂಮಪ್ಪ ಶೆಟ್ಟಿ, ಹರಿಶ್ಚಂದ್ರ ಎಂ, ಲೋಕೇಶ್ ನೋಂಡ, ಸದಾಶಿವ ಚೇರಾಲ್, ಯಾದವ ಬಡಾಜೆ, ಪ್ರವೀಣ್ ಚಂದ್ರ ಬಲ್ಲಾಳ್, ಮಂಜುನಾಥ್ ಶೆಟ್ಟಿ, ಚಂದ್ರಾವತಿ ಶೆಟ್ಟಿ, ಜಯಲಕ್ಷಿ ಭಟ್, ತುಳಸಿ ಕುಮಾರಿ ನೇತೃತ್ವ ನೀಡಿದರು.
ಯತೀರಾಜ್ ಶೆಟ್ಟಿ ಸ್ವಾಗತಿಸಿ, ಚಂದ್ರಹಾಸ ಪೂಜಾರಿ ವಂದಿಸಿದರು, ರವಿ ಮುಡಿಮಾರ್ ನಿರೂಪಿಸಿದರು.







