ಬದಿಯಡ್ಕ: ನಾರಂಪಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನದ ನವೀಕರಣ ಪುನಃಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶಾಭಿಷೇಕ ಮತ್ತು ವರ್ಷಾವಧಿ ಉತ್ಸವಕ್ಕೆ ಭಾನುವಾರ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆಯೊಂದಿಗೆ ಅದ್ಧೂರಿಯ ಚಾಲನೆ ನೀಡಲಾಯಿತು. ಬೆಳಗ್ಗೆ ಗಣಪತಿ ಹೋಮ, ಉಗ್ರಾಣ ಮುಹೂರ್ತ ನಡೆಯಿತು. ಮಲ್ಲ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರ ಸತ್ಯನಾರಾಯಣ ಭಟ್ ಆನೆಮಜಲು ದೀಪಬೆಳಗಿಸಿದರು.
ಹಸಿರುವಾಣಿ ಮೆರವಣಿಗೆ :
ಮವ್ವಾರು ಶ್ರೀಕೃಷ್ಣ ಭಜನಾ ಮಂದಿರದಿಂದ ಆರಂಭಗೊಂಡ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆಯೊಂದಿಗೆ ಶ್ರೀ ಧರ್ಮಶಾಸ್ತಾ ಭಜನಾ ಮಂದಿರ ಕುರುಮುಜ್ಜಿಕಟ್ಟೆ, ವಲವಡಲ ಶ್ರೀ ಮಹಾದೇವ ಶ್ರೀ ಮಹಾವಿಷ್ಣು ದೇವಸ್ಥಾನ ಪಣಿಯೆ, ಅಂಕುರ್ ಎಂಟರ್‍ಫ್ರೈಸಸ್ ಬದಿಯಡ್ಕ ಹಾಗೂ ಭÀಗವದ್ಭಕ್ತರು ತಮ್ಮ ಭಕ್ತಿಯ ಕಾಣಿಕೆಯೊಂದಿಗೆ ಜೊತೆಗೂಡಿದರು. ಪುಟ್ಟ ಮಕ್ಕಳ ಕುಣಿತ ಭಜನೆ, ಮತ್ತು ಕೊಡೆಗಳೊಂದಿಗೆ ಮಾತೆಯರು, ಚೆಂಡೆ, ವಾದ್ಯಮೇಳಗಳು ಮೆರವಣಿಗೆಗೆ ಮೆರುಗು ಹೆಚ್ಚಿಸಿತು.
ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ನಿತ್ಯಾನಂದ ಶೆಣೈ ಬದಿಯಡ್ಕ, ಪವಿತ್ರಪಾಣಿ ಕಿರಣ್ ಕುಮಾರ್ ಕುಣಿಕುಳ್ಳಾಯ ಉಬ್ರಂಗಳ, ಎಂ. ಸಂಜೀವ ಶೆಟ್ಟಿ ಮೊಟ್ಟೆಕುಂಜ, ಹರಿನಾರಾಯಣ ಶಿರಂತಡ್ಕ, ಸುಬ್ರಹ್ಮಣ್ಯ ಭಟ್ ತಲೇಕ, ಐತ್ತಪ್ಪ ಮವ್ವಾರು, ಬಾಲಕೃಷ್ಣ ಮಾಸ್ತರ್ ನಾರಂಪಾಡಿ, ಹರೀಶ್ ಗೋಸಾಡ, ಗೋಪಾಲಕೃಷ್ಣ ಮುಂಡೋಳುಮೂಲೆ, ರವೀಂದ್ರ ರೈ ಗೋಸಾಡ, ನಳಿನಿ ಕೃಷ್ಣ, ರಮೇಶ್ ಶರ್ಮ ಕುರುಮುಜ್ಜಿಕಟ್ಟೆ, ಡಾ. ಶ್ರೀನಿಧಿ ಸರಳಾಯ, ಗಂಗಾಧರ ರೈ ಮಠದಮೂಲೆ ಮೊದಲಾದವರು ನೇತೃತ್ವ ನೀಡಿದ್ದರು..
ಸಂಜೆ ದೇಲಂಪಾಡಿ ಗಣೇಶ ತಂತ್ರಿಗಳವರಿಗೆ ಪೂರ್ಣಕುಂಭ ಸ್ವಾಗತವನ್ನು ನೀಡಿ ಬರಮಾಡಿಕೊಳ್ಳಾಯಿತು.
ಸಾಂಸ್ಕøತಿಕ ಕಾರ್ಯಕ್ರಮಗಳು:
ಉಮಾಮಹೇಶ್ವರ ಸಾಂಸ್ಕøತಿಕ ವೇದಿಕೆಯನ್ನು ಬ್ರಹ್ಮಕಲಶಾಭಿಷೇಕ ಸಮಿತಿಯ ಅಧ್ಯಕ್ಷ ನಿತ್ಯಾನಂದ ಶೆಣೈ ಬದಿಯಡ್ಕ ದೀಪಬೆಳಗಿಸಿ ಉದ್ಘಾಟಿಸಿದರು. ವಿದುಷಿ ವಾಣೀಪ್ರಸಾದ್ ಕಬೆಕ್ಕೋಡು ಸುನಾದ ಸಂಗೀತ ಕಲಾಶಾಲೆ ಬದಿಯಡ್ಕ ಇವರ ವಿದ್ಯಾರ್ಥಿಗಳಿಂದ ಶಾಸ್ತ್ರೀಯ ಸಂಗೀತ, ವಿಶ್ವನಾಥ ರೈ ಮಾನ್ಯ ಮತ್ತು ಬಳಗದವರಿಂದ ಯಕ್ಷಗಾನ ತಾಳಮದ್ದಳೆ, ರಾತ್ರಿ ಕು. ಸುಮೇಧಾ ಮತ್ತು ಕು. ಧರಣಿ ಸರಳಿ ಇವರಿಂದ ಶಾಸ್ತ್ರೀಯ ಸಂಗೀತ ಕಚೇರಿ ನಡೆಯಿತು.
ಇಂದು (ಫೆ.3) ನಡೆಯುವ ಕಾರ್ಯಕ್ರಮಗಳು :
ಪ್ರಾತಃಕಾಲ 5.30ಕ್ಕೆ ಗಣಪತಿ ಹೋಮ, ಪ್ರಾಯಶ್ಚಿತ್ತ ಹೋಮಗಳು, ಪ್ರೋಕ್ತ ಹೋಮ, ಚತುಃಶುದ್ಧಿ, ಧಾರಾ, ಅವಗಾಹ, ಪಂಚಕ, ಅಂಕುರ ಪೂಜೆ, ಸಂಜೆ 6 ಗಂಟೆಗೆ ಹೋಮಕಲಶಾಭಿಷೇಕ, ಅಂಕುರ ಪೂಜೆ ಮಹಾಪೂಜೆ ನಡೆಯಲಿದೆ. ಬೆಳಗ್ಗೆ 10 ಗಂಟೆಗೆ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರ ಆಗಮನ, ಧಾರ್ಮಿಕ ಸಭಾ ವೇದಿಕೆಯ ಉದ್ಘಾಟನೆ ನಡೆಯಲಿದೆ. ಗೌರವಾಧ್ಯಕ್ಷ ಉದ್ಯಮಿ ಸದಾಶಿವ ಶೆಟ್ಟಿ ಕುಳೂರು ಕನ್ಯಾನ ಅಧ್ಯಕ್ಷತೆಯಲ್ಲಿ ಬ್ರಹ್ಮಶ್ರೀ ದೇಲಂಪಾಡಿ ಗಣೇಶ ತಂತ್ರಿಗಳು, ನಾಗೇಂದ್ರ ಭಾರದ್ವಾಜ್ ಕೆ.ಸಿ. ಸುರತ್ಕಲ್ ಪಾಲ್ಗೊಳ್ಳಲಿರುವರು. ಬ್ರಹ್ಮಶ್ರೀ ರವೀಶ ತಂತ್ರಿ ಕುಂಟಾರು ಧಾರ್ಮಿಕ ಉಪನ್ಯಾಸ ನೀಡುವರು. ನಾಡಿನ ಗಣ್ಯರು, ದಾನಿಗಳು ಅಭ್ಯಾಗತರಾಗಿ ಉಪಸ್ಥಿತರಿರುವರು.





.jpg)
.jpg)

